ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಯ ಗುಂಪು ಹತ್ಯಾಚಾರ..! ➤ ಅರ್ಚಕ ಸೇರಿದಂತೆ ಹಲವರ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ ಜ. 06. ಮಹಿಳೆಯೋರ್ವರನ್ನುಸಾಮೂಹಿಕ ಅತ್ಯಾಚಾರ ನಡೆದ ಘಟನೆ ಉತ್ತರ ಪ್ರದೇಶದ ಬಾದೌನ್ ಜಿಲ್ಲೆಯ ಉಘೈತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಧ್ಯವಯಸ್ಕ ಮಹಿಳೆಯೋರ್ವರು ದೇವಸ್ಥಾನಕ್ಕೆ ಹೋಗಿದ್ದು, ಬಳಿಕ ಹಿಂದಿರುಗಲಿಲ್ಲ. ಸ್ಥಳೀಯರ ಪ್ರಕಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ರಕ್ತಸ್ರಾವವಾಗುತ್ತಿದ್ದ ಮಹಿಳೆಯನ್ನು ಬಿಟ್ಟು ಹೋಗಿರುವುದನ್ನು ಗಮನಿಸಿದ್ದಾರೆ. ಪೊಲೀಸರು ಇದನ್ನು ಅಪಘಾತದ ಪ್ರಕರಣ ಎಂದು ದಾಖಲಿಸಲು ಪ್ರಯತ್ನಿಸಿದ್ದು, ನಂತರ ನಡೆಸಿದ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದು, ವರದಿಯ ಪ್ರಕಾರ ಮಹಿಳೆಯ ಪಕ್ಕೆಲುಬು ಹಾಗೂ ಕಾಲು ಮುರಿತಗೊಂಡಿದೆ ಮತ್ತು ಆಕೆಯ ಖಾಸಗಿ ಭಾಗಕ್ಕೆ ರಾಡ್ ತುರುಕಿಸಿದ್ದು, ಈ ಭಾಗಗಳಲ್ಲಿ ಮಾರಣಾಂತಿಕ ಗಾಯಗಳಾಗಿವೆ ಎಂದು ತಿಳಿಸಿದೆ. ದೇವಾಲಯದ ಅರ್ಚಕ ಸತ್ಯನಾರಾಯಣ್ ದಾಸ್ ಅವರ ಸಹಾಯಕ ಮತ್ತು ಮೇವಾಲಿ ನಿವಾಸಿ ವೆದ್ರಾಮ್ ಮತ್ತು ಚಾಲಕ ಜಸ್ಪಾಲ್ ವಿರುದ್ಧ ಉಘೈತಿ ಪೊಲೀಸರು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದು, ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ.

Also Read  ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ➤ ಆಲೂಗೆಡ್ಡೆ ಬೆಲೆಯಲ್ಲಿ ಶೇ.90ರಷ್ಟು ಏರಿಕೆ

 

error: Content is protected !!
Scroll to Top