ಕಾಸರಗೋಡು: ಒಂದೂವರೆ ವರ್ಷದ ಮಗುವನ್ನು ಬಾವಿಗೆಸೆದು ಕೊಂದ ಹೆಮ್ಮಾರಿ…!

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 06. ಒಂದೂವರೆ ವರ್ಷದ ಮಗುವಿನ ಮೃತದೇಹವೊಂದು ಬಾವಿಯಲ್ಲಿ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ತಾಯಿಯನ್ನು ಬಂಧಿಸಲಾಗಿದೆ.


ಬಂಧಿತ ಆರೋಪಿ ತಾಯಿಯನ್ನು ಪೆರ್ಲತ್ತಡ್ಕದ ಶಾರದಾಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಗುವನ್ನು ಸ್ಥಳೀಯರೆಲ್ಲ ಹುಡುಕಾಡಿದಾಗ ಮನೆಯಿಂದ ಸ್ವಲ್ಪ ದೂರದ ಬಾವಿಯಲ್ಲಿ ಮೃತದೇಹ ದೊರಕಿತ್ತು. ಆರಂಭದಲ್ಲಿ ಮಗು ಆಕಸ್ಮಿಕವಾಗಿ ಬಿದ್ದಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಬಾವಿಗೆ ಎಸೆದು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇದೀಗ ಆರೋಪಿ ತಾಯಿಯು ತಾನೇ ಮಗುವನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Also Read  ಇಸ್ರೋ ವಿಜ್ಞಾನಿಯ ಕಾರನ್ನು ಹಿಂಬಾಲಿಸಿ ಕಲ್ಲೆಸೆತ- ಪ್ರಕರಣ ದಾಖಲು

error: Content is protected !!
Scroll to Top