70 ಸಾವಿರ ಹಣಕ್ಕೆ 1 ತಿಂಗಳ ಮಗುವನ್ನೇ ಮಾರಾಟ ಮಾಡಿದ ಪಾಪಿ ತಂದೆ…!



(ನ್ಯೂಸ್ ಕಡಬ) newskadaba.com ಹೈದರಾಬಾದ್, ಜ. 05. ಕೇವಲ 70 ಸಾವಿರ ರೂಪಾಯಿ ಹಣಕ್ಕಾಗಿ ತನ್ನ 1 ತಿಂಗಳ ಹೆಣ್ಣುಮಗುವನ್ನೇ ಮಾರಾಟ ಮಾಡಿದ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ.

ಮಗುವಿನ ತಂದೆತಾಯಿ ಪುಟ್ ಪಾತ್ ಒಂದರಲ್ಲಿ ವಾಸಿಸುತ್ತಿದ್ದು, ಇದನ್ನು ಗಮನಿಸಿದ್ದ ಮತ್ತೋರ್ವ  ದಂಪತಿಯು ಮಗುವನ್ನ ತಮಗೆ ನೀಡುವಂತೆ ಕೇಳಿದ್ದು, ಇದನ್ನು ಒಪ್ಪಿದಪಾಪಿ ತಂದೆಯು ತಾಯಿಗೆ ತಿಳಿಯದ ಹಾಗೆ ಮಗುವನ್ನು 70 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದಾನೆ. ಇದೀಗ ಮಗುವನ್ನುತಾಯಿಯು ಪೊಲೀಸರಿಗೆ ದೂರು ನೀಡಿದ್ದು, ಈ ವೇಳೆ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಮಗುವನ್ನು ಪತ್ತೆ ಮಾಡಿ ಮಕ್ಕಳ ಕಲ್ಯಾಣ ಇಲಾಖೆಗೆ ರವಾನಿಸಿದ್ದಾರೆ.





error: Content is protected !!
Scroll to Top