ಕೇರಳದಲ್ಲಿ ಹಕ್ಕಿ ಜ್ವರ ಪತ್ತೆಯಾದ ಹಿನ್ನೆಲೆ ➤ ಕಾಸರಗೋಡಿನಲ್ಲೂ ಹೈ ಅಲರ್ಟ್

(ನ್ಯೂಸ್ ಕಡಬ) newskadaba.com ಕೇರಳ, ಜ. 05. ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರವು ಆತಂಕ ಮೂಡಿಸಿದ್ದು, ಇದೀಗ ಕೇರಳವನ್ನೂ ಪ್ರವೇಶಿಸಿದ್ದು, ಕೊಟ್ಟಾಯಂ ಮತ್ತು ಅಳಪ್ಪುಝ ಜಿಲ್ಲೆಗಳ ಬಾತುಕೋಳಿಗಳಲ್ಲಿ ಈ ಸೋಂಕು ಪತ್ತೆಯಾಗಿದೆ.

ಕೊಟ್ಟಾಯಂನ ನೀಂದೂರ್‌ ಎಂಬಲ್ಲಿರುವ ಬಾತುಕೋಳಿ ಫಾರಂ ಒಂದರಲ್ಲಿ ಎಚ್‌-5 ಎನ್‌-8 ವೈರಸ್‌ ಸೋಂಕಿನಿಂದ ಸುಮಾರು 1,500ರಷ್ಟು ಬಾತುಕೋಳಿಗಳು ಸತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ಎಲ್ಲ ಬಾತುಕೋಳಿಗಳು, ಕೋಳಿಗಳು ಮತ್ತು ಇತರ ಸಾಕು ಹಕ್ಕಿಗಳನ್ನು ಕೊಲ್ಲಲು ಆಡಳಿತ ಮಂಡಲಿ ನಿರ್ಧರಿಸಿದೆ. ಅಳಪ್ಪುಳದಲ್ಲೂ ಪ್ರಕರಣಗಳು ಬೆಳಕಿಗೆ ಬಂದಿದ್ದು, ಎಲ್ಲ ಜಿಲ್ಲೆಗಳಿಗೂ ಅಲರ್ಟ್‌ ಘೋಷಿಸಲಾಗಿದೆ. ವೈರಸ್‌ ಗೆ ಕಡಿವಾಣ ಹಾಕಲು ಸುಮಾರು 40 ಸಾವಿರಕ್ಕೂ ಹೆಚ್ಚು ಬಾತುಕೋಳಿಗಳನ್ನು ಕೊಲ್ಲಬೇಕಾಗುತ್ತದೆ ಎಂದು ರಾಜ್ಯ ಪಶುಸಂಗೋಪನ ಸಚಿವ ರಾಜು ಹೇಳಿದ್ದಾರೆ.

Also Read  ಪುಣ್ಯಸ್ನಾನಕ್ಕೆ ಕಲ್ಯಾಣಿಗಿಳಿದ ಐವರು ಮೃತ್ಯು

error: Content is protected !!
Scroll to Top