ಅಕ್ರಮ 1.47 ಕೋಟಿ ನೇಪಾಳ ಕರೆನ್ಸಿ ಹೊಂದಿದ್ದ ಆರೋಪ ➤ ಭಾರತದ ನಾಗರಿಕ ನೇಪಾಳದಲ್ಲಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಠ್ಮಂಡು, . 04. ಅಕ್ರಮವಾಗಿ ನೇಪಾಳದ ಕರೆನ್ಸಿ ಆರೋಪದಡಿಯಲ್ಲಿ ಭಾರತೀಯ ನಾಗರಿಕ ಸೇರಿದಂತೆ ಇಬ್ಬರು ಆರೋಪಿಗಳನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಭಾರತದ ಗೋರಖ್ ಪುರದ ನಿವಾಸಿ ಅಮಿತ್ ಕುಮಾರ್ ಗುಪ್ತಾ (30) ಹಾಗೂ ಕಪಿಲವಸ್ತು ಜಿಲ್ಲೆಯ ಸಂಗಮ್ ತರು (22) ಎಂದು ಗುರುತಿಸಲಾಗಿದೆ. ಪ್ರತಿನಿತ್ಯದಂತೆ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಇಬ್ಬರು ಪ್ರಯಾಣಿಕರಿದ್ದ ಕಾರಿನಲ್ಲಿ ಸುಮಾರು 1.47 ಕೋಟಿ ನೇಪಾಳ ಕರೆನ್ಸಿ ಪತ್ತೆಯಾಗಿದ್ದು, ಇದನ್ನು ಮೂರು ಚೀಲದಲ್ಲಿ ತುಂಬಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.

error: Content is protected !!

Join the Group

Join WhatsApp Group