(ನ್ಯೂಸ್ ಕಡಬ) newskadaba.com ನವದೆಹಲಿ, ಅ.12. ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರನ್ನು ದೆಹಲಿ ಸಚಿವಾಲಯದ ಬಳಿಯಿಂದಲೇ ಎಗರಿಸುವ ಮೂಲಕ ಕಳ್ಳರು ಮುಖ್ಯಮಂತ್ರಿಯವರಿಗೇ ಕಳ್ಳತನದ ಬಿಸಿ ಮುಟ್ಟಿಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಕೇಜ್ರಿವಾಲ್ ಸಾಮಾನ್ಯವಾಗಿ ಉಪಯೋಗಿಸುತ್ತಿದ್ದ ನೀಲಿ ಬಣ್ಣದ ವ್ಯಾಗನರ್ ಕಾರನ್ನು ಕಳವು ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಡುತ್ತಿದ್ದಾರೆ. ಕಾರ್ ಕಳವಾಗುವ ಸ್ಥಳದಲ್ಲಿನ ದೃಶ್ಯಗಳು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋದ ಗುಣಮಟ್ಟ ಸರಿಯಿಲ್ಲದೇ ಮಂಕಾಗಿದೆ. ಮುಖ್ಯಮಂತ್ರಿಯ ಕಾರನ್ನೇ ಕಳ್ಳರು ಕಳವುಗೈದುದರ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.