ಪ್ರಧಾನಿ ಮೋದಿಗೆ ಕಾದಿದೆಯೇ ಗಂಡಾಂತರ…! ► ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ

(ನ್ಯೂಸ್ ಕಡಬ) newskadaba.com ಹಾಸನ, ಅ.12. ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದ್ದು, ಪ್ರಧಾನಿಯ ಈ ಗಂಡಾಂತರಕ್ಕೆ ವೃಶ್ಚಿಕ ರಾಶಿ ದೋಷವೇ ಕಾರಣ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಅವರು ಭವಿಷ್ಯ ನುಡಿದಿದ್ದಾರೆ.

ಹಾಸನಾಂಬಾ ದೇಗುಲದ ದರ್ಶನಕ್ಕೆ ಆಗಮಿಸಿರುವ ಬ್ರಹ್ಮಾಂಡ ಗುರೂಜಿ, ಪ್ರಧಾನಿಯವರು ದೇವರ ಮೊರೆ ಹೋಗಿ ಪೂಜೆ, ಹೋಮ ಮಾಡಿ ಪರಿಹಾರ ಕಂಡುಕೊಳ್ಳದೇ ಇದ್ದರೆ ಮೃತ್ಯು ಕೂಡ ಎದುರಾಗಬಹುದು ಎಂದಿದ್ದಾರೆ.

ರಾಜ್ಯ ರಾಜಕೀಯದ ಬಗ್ಗೆ ಪ್ರಸ್ತಾಪಿಸಿ ಸಿಎಂ‌ ಸಿದ್ದರಾಮಯ್ಯರಿಗೆ ಉತ್ತಮ ಯೋಗವಿದ್ದು, ಸ್ವಂತ ಬುದ್ಧಿ ಬಳಸಿಕೊಳ್ಳಬೇಕು. ಇತರರ ಮಾತು ಕೇಳಿದರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು. ಮುಂದಿನ ಚುನಾವಣೆಯಲ್ಲಿ ಮಾಜಿ ಸಿಎಂ‌ ಎಚ್‌.ಡಿ. ಕುಮಾರಸ್ವಾಮಿ ಕಿಂಗ್ ಮೇಕರ್ ಆಗಲಿದ್ದು, ಅವರಿಗಿದ್ದ ಆರೋಗ್ಯ ದೋಷ ಇಲ್ಲದಾಗಿದೆ. ತಂದೆಯವರ ಮಾತು ಕೇಳಿದರೆ ಮತ್ತೊಮ್ಮೆ ಸಿಎಂ ಆಗುವ ಸಾಧ್ಯತೆಯೂ ಇದೆ ಎಂದು ಭವಿಷ್ಯ ನುಡಿದಿದ್ದಾರೆ.

error: Content is protected !!
Scroll to Top