ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಸತ್ತರೂ ಹಿಂದಿರುಗುವುದಿಲ್ಲ ➤ ಪ್ರತಿಭಟನಾ ನಿರತ ರೈತರು

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 22. ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಮಸೂದೆಯ ವಿರುದ್ಧ ದೆಹಲಿ ಗಡಿಯಲ್ಲಿ ಮೈಕೊರೆಯುವ ಚಳಿಯ ನಡುವೆಯೂ ರೈತರ ಪ್ರತಿಭಟನೆ ಮುಂದುವರಿದಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಸತ್ತರೂ ಸರಿ ನಾವು ಇಲ್ಲಿಂದ ಹಿಂದಿರುಗುವುದಿಲ್ಲ ಎಂದು ಪ್ರತಿಭಟನಾನಿರತ ರೈತರು ಹೇಳಿದ್ದಾರೆ.

ಸುಮಾರು ನಾಲ್ಕು ವಾರಗಳಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನಗಳ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದರಲ್ಲಿ ಸುಮಾರು 30 ಮಂದಿ ಈವರೆಗೆ ಚಳಿ ಸೇರಿದಂತೆ ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರತಿಕೂಲ ಹವಾಮಾನವು ರೈತರ ನಿದ್ದೆಗೆಡಿಸಿದೆ. ಇನ್ನು ಪ್ರಧಾನಿಯವರು ಶೀಘ್ರದಲ್ಲೇ ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯಲಿದ್ದಾರೆ ಎಂಬುದಾಗಿ ಭಾವಿಸಿದ್ದೇವೆ. ಇದು ಪ್ರಜಾಪ್ರಭುತ್ವ ಮೋದಿ ಅವರು ನಮ್ಮ ಮಾತನ್ನು ಕೇಳಬೇಕು ಎಂದು ರೈತ ಪಾಘ್ ಸಿಂಗ್ ಹೇಳಿದ್ದಾರೆ.

Also Read  ಬೆಳ್ಳಂಬೆಳಗ್ಗೆ ಕಡಬದ ಯುವಕನಿಗೆ ಸೈಬರ್ ವಂಚಕನಿಂದ ಕರೆ..! ➤ ಯುವಕನ ಜಾಣತನಕ್ಕೆ ಇಂಗು ತಿಂದ ಮಂಗನಂತಾದ ವಂಚಕ

error: Content is protected !!
Scroll to Top