ಕಾಸರಗೋಡು: ಶಾಸಕ ಎಂ.ಸಿ. ಕಮರುದ್ದೀನ್ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಕಾಸರಗೋಡು, ನ. 17. ಚಿನ್ನ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಎಂ.ಸಿ. ಕಮರುದ್ದೀನ್ ರನ್ನು ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಕ್ತದೊತ್ತಡ ಅಧಿಕಗೊಂಡಿದ್ದು ಅಲ್ಲದೇ ಮಧುಮೇಹ ಪ್ರಮಾಣವು ಹೆಚ್ಚಾಗಿದ್ದು, ಚಿಕಿತ್ಸೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Scroll to Top