ಹೊಸಮಠ: ಅಕ್ರಮ ಮರಳುಗಾರಿಕೆಗೆ ಅನಧಿಕೃತ ಸಂಪರ್ಕ ರಸ್ತೆ ➤ ರಸ್ತೆ ಬಂದ್ ಮಾಡಿ ಖಡಕ್ ಎಚ್ಚರಿಕೆ ನೀಡಿದ ಎಸ್.ಐ. ರುಕ್ಮ ನಾಯಕ್

(ನ್ಯೂಸ್ ಕಡಬ) newskadaba.com ಕಡಬ, ನ‌. 16. ತಾಲೂಕಿನ ಕುಟ್ರುಪಾಡಿ ಗ್ರಾ.ಪಂ. ವ್ಯಾಪ್ತಿಯ ಗುಂಡ್ಯ ಹೊಳೆಯಿಂದ ಅಕ್ರಮ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಡಬ ಎಸ್.ಐ ರುಕ್ಮ ನಾಯಕ್ ಅನಧಿಕೃತ ಸಂಪರ್ಕ ದಾರಿಯನ್ನೇ ಕಡಿತಗೊಳಿಸಿದ ಘಟನೆ ಇಂದು ನಡೆದಿದೆ.


ಹಲವು ದಿನಗಳಿಂದ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರಿಂದ ಗ್ರಾಮಸ್ಥರಿಗೆ ತೊಂದರೆಯಾಗುವ ಕುರಿತು ಆರೋಪಗಳು ಕೇಳಿ ಬಂದಿದ್ದವು. ಇದೀಗ ಆರೋಪದ ಕುರಿತು ಖಚಿತ ಮಾಹಿತಿ ಪಡೆದ ಎಸ್.ಐ ರುಕ್ಮ ನಾಯಕ್ ಅವರು ಹೊಳೆಗೆ ವಾಹನ ಇಳಿಯಲು ನಿರ್ಮಿಸಲಾದ ಅನಧಿಕೃತ ರಸ್ತೆಯನ್ನು ಸಂಪೂರ್ಣ ಮುಚ್ಚಿ, ಜಾಗದ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

Scroll to Top