ಪ್ರೇಯಸಿ ಮೃತಪಟ್ಟ ಹಿನ್ನೆಲೆ ➤ ಆಕೆಯ ಸಮಾಧಿಯ ಬಳಿಯೇ ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮ…!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಅ. 26. ದುರಂತಮಯ ಪ್ರಸಿದ್ಧ ಪ್ರೇಮ ಕಥೆಗಳು ಇದಾಗಲೇ ಸಾಕಷ್ಟು ಪ್ರಚಾರದಲ್ಲಿ ಇವೆ. ಅಂಥದ್ದೇ ಒಂದು ನೋವಿನ ಪ್ರೀತಿಯ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪ್ರೇಯಸಿ ಸಾವನ್ನಪ್ಪಿದ ಕಾರಣಕ್ಕೆ ಮನನೊಂದ ಯುವಕನೊಬ್ಬ ಆಕೆಯ ಸಮಾಧಿಯ ಬಳಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಮಹಾದೇವಾಪುರ್ ಮಂಡಲದ ಕುದುರುಪಲ್ಲಿ ಎಂಬ ಗ್ರಾಮದಲ್ಲಿ ನಡೆದಿದೆ.

 

 

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಮಹೇಶ್(24) ಎಂದು ಗುರುತಿಸಲಾಗಿದ್ದು, ತೆಲಂಗಾಣ ರಾಜ್ಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಅದೇ ಗ್ರಾಮದ  ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಳು, ಇದರಿಂದ ತೀವ್ರವಾಗಿ ಮನನೊಂದಿದ್ದ ಯುವಕ ಸಮಾಧಿಯ ಬಳಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿಸಿದ ಹುಡುಗಿ ಇಲ್ಲದೆ ಬದುಕಲು ಸಾಧ್ಯವಿಲ್ಲವೆಂದು ತನ್ನ ವಾಟ್ಸ್​ಆಯಪ್​ ಸ್ಟೇಟಸ್​ನಲ್ಲಿಯೂ ಹಾಕಿಕೊಂಡಿದ್ದಾನೆ. ಇದು ನಂತರ ಬೆಳಕಿಗೆ ಬಂದಿದೆ. ಆಕೆಯ ಸಾವಿನ ನಂತರ ತುಂಬಾ ನೊಂದುಕೊಂಡು ಖಿನ್ನತೆಗೆ ಜಾರಿದ್ದ ಎಂದು ಕುಟುಂಬದವರು ಹೇಳಿದ್ದಾರೆ.

Also Read  ಸರಕಾರಿ ಶಾಲೆಯ ಶಿಕ್ಷಕ ಪತ್ನಿ, ಮಗಳ ಜೊತೆ ಆತ್ಮಹತ್ಯೆ

 

error: Content is protected !!
Scroll to Top