ಸತತ 2ನೇ ದಿನವೂ ಇಳಿಕೆಯಾದ ಚಿನ್ನದ ದರ ➤ ಆಭರಣ ಪ್ರಿಯರಲ್ಲಿ ಮತ್ತೆ ಮಂದಹಾಸ

(ನ್ಯೂಸ್ ಕಡಬ) newskadaba.comಬೆಂಗಳೂರು, ಅ. 24.  ಲಾಕ್ಡೌನ್ಸಮಯದಲ್ಲಿ ಗಗನಕ್ಕೇರಿದ್ದ ಬಂಗಾರದ ಬೆಲೆ ಕೊಂಚ ಇಳಿಕೆಯಾಗಿದ್ದು, ಸದ್ಯ ಸತತ ಎರಡನೇ ದಿನವೂ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಂಡಿದ್ದು,ಗ್ರಾಹಕರನ್ನ ಸಂತುಷ್ಠರನ್ನಾಗಿಸಿದೆ.

ಬೆಂಗಳೂರಿನಲ್ಲಿ ಇಂದು 10 ಗ್ರಾಂ. ಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 210 ರೂಪಾಯಿ ಇಳಿಕೆಯಾಗಿದ್ದು, ಈ ಮೂಲಕ ಬೆಲೆ 47,000 ರೂಪಾಯಿಯಾಗಿದೆ. ಇನ್ನು, 24 ಕ್ಯಾರೆಟ್​ ನ 10 ಗ್ರಾಂ. ಚಿನ್ನದ ದರವೂ 130 ರೂಪಾಯಿ ಇಳಿಕೆ ಕಂಡು, 51,270 ರೂಪಾಯಿ ಆಗಿದೆ. ಇನ್ನು ಇತ್ತ ಬೆಳ್ಳಿ ದರವೂ 100 ರೂ.ಇಳಿಕೆಯಾಗಿ. ಒಂದು ಕೆ. ಜಿ ಬೆಳ್ಳಿಯ ಬೆಲೆ 62,500 ರೂ ಆಗಿದೆ. ತಜ್ಞರು ಶೀಘ್ರವೇ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Also Read  ಮಂಗಳೂರು: ಹೋಟೆಲ್ ನಲ್ಲಿ ತಂಗಿದ್ದ ಅನ್ಯಕೋಮಿನ ಜೋಡಿ ➤ ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು

 

error: Content is protected !!
Scroll to Top