ಕೇಂದ್ರ ಸರಕಾರದಿಂದ ಉಚಿತ ವಿದ್ಯುತ್ ಯೋಜನೆ ► ಸೌಭಾಗ್ಯ ಯೋಜನೆ’ಗೆ ಪ್ರಧಾನಿ ಮೋದಿಯಿಂದ ಚಾಲನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.25. ಬಡವರಿಗೆ ಉಚಿತ ವಿದ್ಯುತ್ ಸಂಪರ್ಕ ನೀಡುವ 16,320 ಕೋಟಿ ರೂ. ಮೊತ್ತದ ‘ಸೌಭಾಗ್ಯ ಯೋಜನೆ’ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರದಂದು ಚಾಲನೆ ನೀಡಿದ್ದಾರೆ.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನವಾದ ಇಂದು ಓಎನ್ ಜಿಸಿ ಊರ್ಜಾ ಭವನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಅಂತಿಮ ವರ್ಗದವರಿಗೂ ಹಳ್ಳಿ ಹಳ್ಳಿಗಳಿಗೂ ಉಚಿತ ವಿದ್ಯುತ್ ಒದಗಿಸುವ ‘ಸೌಭಾಗ್ಯ ಯೋಜನೆ’ಯನ್ನು ಘೋಷಿಸಿದರು. ಈ ಯೋಜನೆಗೆ ಕೇಂದ್ರ ಸರ್ಕಾರ 16 ಸಾವಿರ ಕೋಟಿ ರೂ. ಗಳನ್ನೂ ಭರಿಸಲಿದ್ದು, ಭಾರತದ ಎಲ್ಲಾ ಗ್ರಾಮಗಳಲ್ಲಿ ಮಾತ್ರವಲ್ಲದೆ ಎಲ್ಲಾ ಮನೆಗಳಲ್ಲೂ ವಿದ್ಯುತ್ ಸಂಪರ್ಕ ನೀಡಲಾಗುವುದು. ವಿದ್ಯುತ್ ಸಂಪರ್ಕಕ್ಕಾಗಿ ಯಾವ ಬಡವನೂ ಹಣ ತೆರಬೇಕಾಗಿಲ್ಲ. ವಿದ್ಯುತ್ ಸಂಪರ್ಕಕ್ಕಾಗಿ ಈ ಹಿಂದೆ ಜನರು ಕಚೇರಿಗಳಿಗೆ ಅಲೆದಾಡುತ್ತಿದ್ದರು. ಆದರೆ ಇಂದು ಸರಕಾರವೇ ಅವರ ಮನೆಗೆ ತೆರಳಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Also Read  ನ್ಯೂಯಾರ್ಕ್ ಜಿಲ್ಲಾ ನ್ಯಾಯಾಧೀಶರಾಗಿ ಭಾರತೀಯ ಮೂಲದ ಅರುಣ್ ಸುಬ್ರಮಣಿಯನ್ ನೇಮಕ

ದೇಶದಲ್ಲಿ 4 ಕೋಟಿ ಮನೆಗಳಲ್ಲಿ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲ. 25 ಶೇ, ಜನರಿಗೆ ವಿದ್ಯುತ್ ಸಂಪರ್ಕವಿಲ್ಲ. ಅವರಿನ್ನೂ 18 ನೆಯ ಶತಮಾನದಲ್ಲೇ ಬದುಕುತ್ತಿದ್ದಾರೆ ಎಂದು ಇದೇ ಸಂದರ್ಭ ಪ್ರಧಾನಿ ಹೇಳಿದರು. 2019ರ ಮಾರ್ಚ್ 31ರ ಒಳಗೆ ದೇಶದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿರುವುದಾಗಿ ಸರಕಾರ ಹೇಳಿದೆ. ಅಷ್ಟೇ ಅಲ್ಲದೇ ಈ ಯೋಜನೆಯಿಂದ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಸಿಗಲಿದೆ‌. ಈಗಾಗಲೇ ಮುದ್ರಾ ಯೋಜನೆಯಲ್ಲಿ 9 ಕೋಟಿ ಜನರಿಗೆ 3.5 ಲಕ್ಷ ಕೋಟಿ ಸಾಲ ನೀಡಿದ್ದೇವೆ. 310 ರೂಪಾಯಿ ಇದ್ದ ಎಲ್ಇಡಿ ಬಲ್ಬ್ ಬೆಲೆಯನ್ನ 40 ರೂ.ಗೆ ಇಳಿಸಿದ್ದೇವೆ, ನಮ್ಮ ಸರ್ಕಾರ ಪರಿಸರ ಸಂರಕ್ಷಣೆಗೆ ಕಟಿಬದ್ಧವಾಗಿದೆ. ವಿದ್ಯುತ್ ಕ್ಷೇತ್ರದಲ್ಲಿ ಭಾರೀ ಸುಧಾರಣೆಯಾಗಲಿದೆ ಎಂದಿದ್ದಾರೆ.

error: Content is protected !!
Scroll to Top