ಧೋನಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ 16 ವರ್ಷದ ಯುವಕ ಬಂಧನ

(ನ್ಯೂಸ್ ಕಡಬ) newskadaba.com ರಾಂಚಿ, ಅ. 12: ಧೋನಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ 16 ವರ್ಷದ ಯುವಕನನ್ನು ಬಂಧಿಸಲಾಗಿದೆ. ಐಪಿಎಲ್​ನಲ್ಲಿ ಮಹೇಂದ್ರ ಸಿಂಗ್​ ಧೋನಿ ಚೆನ್ನಾಗಿ ಆಡುತ್ತಿಲ್ಲ ಎಂಬ ಕಾರಣಕ್ಕೆ ಅವರ ಮಗಳು ಝಿವಾಳಿಗೆ ಇನ್ಸ್ಟಾಗ್ರಾಂನಲ್ಲಿ ಕಿರಾತಕನೋರ್ವ ಅತ್ಯಾಚಾರ ಬೆದರಿಕೆ ಹಾಕಿದ್ದ.

ಅವನ ಕಾಮೆಂಟ್​ ನೋಡಿದ ನೆಟ್ಟಿಗರು, ಕೆಲವು ಗಣ್ಯರು ಹಿಗ್ಗಾಮುಗ್ಗಾ ಜಾಡಿಸಿದ್ದರು. ಅಷ್ಟೇಅಲ್ಲ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು. ಇದೀಗ ಪೊಲೀಸರು ಝಿವಾಳಿಗೆ ರೇಪ್​ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ದುರುಳ ಗುಜರಾತ್​ನ ಕಚ್​ ಜಿಲ್ಲೆಯವನಾಗಿದ್ದು, ಝಾರ್ಖಂಡದ ರಾಂಚಿಯಲ್ಲಿರುವ ರಾತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ➤ ಯುವಕನ ಬಂಧನ

 

error: Content is protected !!
Scroll to Top