ಮಾಗಡಿಯಲ್ಲಿ ಯುವತಿಯ ರೇಪ್ ಅಂಡ್ ಮರ್ಡರ್ ➤ ದೊಡ್ಡಪ್ಪನ ಜಮೀನಿನಲ್ಲಿ ಯುವತಿ ಶವವಾಗಿ ಪತ್ತೆ

(ನ್ಯೂಸ್ ಕಡಬ) newskadaba.com ರಾಮನಗರ, ಅ. 11 : ಜಿಲ್ಲೆಯ ಮಾಗಡಿ ತಾಲೂಕಿನ ಬೆಟ್ಟಹಳ್ಳಿಯಿಂದ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ. ಅಕ್ಟೋಬರ್​ 8 ರಂದು ಮನೆಯಿಂದ ಕಾಣೆಯಾಗಿದ್ದ 19 ವರ್ಷದ ಯುವತಿ ಹೇಮಲತಾಳ ಮೃತದೇಹ ಇಂದು ಪತ್ತೆಯಾಗಿದೆ.

 

ಅಕ್ಟೋಬರ್ 9 ರಂದು ಯುವತಿ ಕಾಣೆಯಾದ ಬೆನ್ನಲ್ಲೇ ಕುದೂರು ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲಾಗಿತ್ತು. ಇಂದು ಹೇಮಲತಾಳ ಮೃತದೇಹ ಆಕೆಯ ಮನೆಯ ಸಮೀಪವೇ ಇದ್ದ ಜಮೀನಿನಲ್ಲಿ ಪತ್ತೆಯಾಗಿದೆ. ಯುವತಿಯ ದೊಡ್ಡಪ್ಪ ರವೀಂದ್ರಕುಮಾರ್ ಜಮೀನಿನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಯುವತಿಯ ಬಟ್ಟೆಗಳನ್ನ ಬೇರೆಡೆ ಎಸೆದ ನಂತರ ದುಷ್ಕರ್ಮಿಗಳು ಆಕೆಯನ್ನು ಕೊಲೆ ಮಾಡಿ ಮಣ್ಣಿನಲ್ಲಿ ‌ಹೂತು ಹಾಕಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

Also Read  ರೆಂಜಿಲಾಡಿ ಶಾಲಾ ದುರಸ್ತಿಗೆ ಸ್ಥಳ ಪರಿಶೀಲನೆ

 

error: Content is protected !!
Scroll to Top