ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟು ವಿಕೃತಿ ಮೆರೆದ ಪತಿ

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 10: ವ್ಯಕ್ತಿಯೊಬ್ಬ ಪತ್ನಿಯ ಹೊಟ್ಟೆ ಹಾಗೂ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟು ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಟಿಸಿ ಪಾಳ್ಯದಲ್ಲಿ ನಡೆದಿದೆ.

 

ಆರೋಪಿ ಸೂರಜ್ ಸಿಂಗ್ ಕೃತ್ಯಕ್ಕೆ ಪತ್ನಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಮಹಿಳೆಯ ಪೋಷಕರು ಮಗಳ ಉತ್ತಮ ಭವಿಷ್ಯಕ್ಕಾಗಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಅಲ್ಲದೇ ವರದಕ್ಷಿಣೆ ನೀಡಿ, 15 ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು.ಪತಿ ಸೂರಜ್ ಸಿಂಗ್ ವಿವಾಹವಾದ ಆರಂಭದಿಂದಲೇ ತಂದೆಯ ಮನೆಯಿಂದ ಹಣ ತರುವಂತೆ ಹೆಂಡತಿಗೆ ಪೀಡಿಸುತ್ತಿದ್ದನು. ಪಾಪಿ ಪತಿಯ ಹಿಂಸೆ ತಾಳಲಾರದೇ ಪತ್ನಿ ಒಂದೇರಡು ಬಾರಿ ಹಣವನ್ನು ತಂದು ಕೊಟ್ಟಿದ್ದಳು.

Also Read  ಕಂಟೈನರ್ ಲಾರಿ- ಕಾರು ಢಿಕ್ಕಿ: ಓರ್ವ ಮೃತ್ಯು..!  ಇಬ್ಬರು ಗಂಭೀರ ಗಾಯ                 

 

ಇತ್ತೀಚೆಗಷ್ಟೆ ಮತ್ತೆ ಸೂರಜ್ ಸಿಂಗ್ ಮತ್ತು ಆತನ ತಾಯಿ ಸೇರಿಕೊಂಡು ಗಲಾಟೆ ಮಾಡಿದ್ದಾರೆ.ಈ ವೇಳೆ ಗಲಾಟೆ ವಿಕೋಪಕ್ಕೆ ಹೋಗಿ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾನೆ. ಪತಿಯ ನೀಚ ಕೃತ್ಯಕ್ಕೆ ಬಲಿಯಾಗಿರೋ ಪತ್ನಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ಮಾಡುತ್ತಿದ್ದಾಳೆ. ಇತ್ತ ಪತಿರಾಯ ತಲೆ ಮರೆಸಿಕೊಂಡಿದ್ದಾನೆ. ಈ ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

error: Content is protected !!
Scroll to Top