ಯುದ್ಧ ವಿಮಾನದ ಮಾಹಿತಿ ಪಾಕ್ ಗೆ ರವಾನೆ ➤ ಮುಂಬೈ ಹೆಚ್‌ಎಎಲ್ ಅಧಿಕಾರಿ ಬಂಧನ

(ನ್ಯೂಸ್ ಕಡಬ) newskadaba.com ಮುಂಬೈ, ಅ.10: ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳ ಬಗ್ಗೆ ಅತ್ಯಂತ ರಹಸ್ಯ ಮಾಹಿತಿ ಪೂರೈಸಿದ ಆರೋಪದ ಮೇಲೆ ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಉದ್ಯೋಗಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಅಧಿಕಾರಿಗಳು ನಾಸಿಕ್ನ ಓಜರ್ನಲ್ಲಿರುವ ಎಚ್‌ಎಎಲ್ ನೌಕರನನ್ನು ಬಂಸಿ ತೀವ್ರ ವಿಚಾರಣೆ ನಡೆಸಿದೆ.

ಈತ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐಗೆ ಎಚ್‌ಎಎಲ್ನ ಯುದ್ಧ ವಿಮಾನಗಳು, ತಯಾರಿಕಾ ಘಟಕ, ವಾಯುನೆಲೆ ಮತ್ತು ನಿರ್ಬಂತ ಪ್ರದೇಶಗಳ ಕುರಿತು ಗೌಪ್ಯ ಮಾಹಿತಿಗಳನ್ನು ರವಾನಿಸಿದ್ದಎಂಬುವುದು ತಿಳಿದು ಬಂದಿದೆ..ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಟಿಎಸ್ ಅಧಿಕಾರಿಗಳು ಆತನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

Also Read  ಸಿಎಂ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

error: Content is protected !!
Scroll to Top