10 ತಿಂಗಳ ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ ➤ ಸಹಾಯಕ್ಕಾಗಿ ಗೂಗಲ್ ಸರ್ಚ್.?!

 (ನ್ಯೂಸ್ ಕಡಬ) newskadaba.com ಅಮೆರಿಕ, ಅ. 09: ಪಾಪಿ ತಂದೆಯೊಬ್ಬ ತನ್ನ 10 ತಿಂಗಳ ಹೆಣ್ಣು ಶಿಶುವಿನ ಮೇಲೆ ಅತ್ಯಾಚಾರವೆಸಗಿ ಬಳಿಕ ಗೂಗಲ್ ಸರ್ಚ್ ಮಾಡಿರುವ ಆಘಾತಕಾರಿ ಘಟನೆಯೊಂದು ಅಮೆರಿಕದ ಪೆನ್ಸಿಲ್ವೇನಿಯದಲ್ಲಿ ನಡೆದಿದೆ.

29 ವರ್ಷದ ವ್ಯಕ್ತಿ ತನ್ನ ಮಗುವನ್ನು ಆರೈಕೆ ಮಾಡುತ್ತಿದ್ದ ವೇಳೆ ಶಿಶುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಪರಿಣಾಮ ಮಗುವಿನ ಖಾಸಗಿ ಅಂಗದಲ್ಲಿ ಗಾಯಗಳಾಗಿದ್ದು, ರಕ್ತಸ್ರಾವವಾಗಿದೆ. ಅಲ್ಲದೆ ಶಿಶು ಉಸಿರಾಟವನ್ನೂ ನಿಲ್ಲಿದೆ. ಇದರಿಂದ ಗಾಬರಿಗೊಂಡ ವ್ಯಕ್ತಿ ಕೂಡಲೇ ಗೂಗಲ್ ಮೊರೆ ಹೋಗಿದ್ದಾನೆ.

ಮಗು ಉಸಿರಾಟ ನಿಲ್ಲಿದಾಗ ವ್ಯಕ್ತಿ ಗೂಗಲ್ ಸರ್ಚ್ ಮಾಡಿದನೇ ಹೊರತು, ಆಸ್ಪತ್ರೆ ಅಥವಾ ತುರ್ತು ಸೇವೆಗೆ ಕರೆ ಮಾಡಿಲ್ಲ. ಪೊಲೀಸರು ವ್ಯಕ್ತಿಯ ಮೊಬೈಲ್ ಫೋನ್ ವಶಕ್ಕೆ ಪಡೆದು ವ್ಯಕ್ತಿಯ ಚಟುವಟಿಕೆಗಳ ಬಗ್ಗೆ ಕಲೆ ಹಾಕಿದ್ದಾರೆ. ಈ ವೇಳೆ ಆತ ಗೂಗಲ್ ಸರ್ಚ್ ಮಾಡಿರುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಮಹಿಳೆಯರೊಂದಿಗೆ ಮಾತನಾಡಿರುವುದು ಬೆಳಕಿಗೆ ಬಂದಿದೆ. ಆದರೆ ಈತ ಮಹಿಳೆಯರ ಜೊತೆಯೂ ತನ್ನ ಮಗಳ ಸ್ಥಿತಿಯ ಬಗ್ಗೆ ಮಾಹಿತಿ ನೀಡಿಲ್ಲ.ಮಗುವಿನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ಖಾಸಗಿ ಅಂಗಕ್ಕೆ ಗಂಭೀರ ಗಾಯಗಳಾಗಿದ್ದು, ಅತ್ಯಾಚಾರ ನಡೆದಿರುವುದು ಸ್ಪಷ್ಟವಾಗಿದೆ.

Also Read  ಹಳಿ ತಪ್ಪಿದ ರೈಲು - 15 ಮಂದಿ ಮೃತ್ಯು, 40ಕ್ಕೂ ಅಧಿಕ ಮಂದಿಗೆ ಗಾಯ

 

error: Content is protected !!
Scroll to Top