(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 09: ಸಿಲಿಕಾನ್ ಸಿಟಿ ಉಗ್ರರ ಅಡಗುದಾಣ ಆಗಿರೋದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಅಡಗಿದ್ದ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು NIA ಅಂದರ್ ಮಾಡಿದೆ.
ಬೆಂಗಳೂರಿನಲ್ಲಿ ಕೊರೊನಾ ಆತಂಕದ ಮಧ್ಯೆ ಉಗ್ರರು ಸದ್ದಿಲ್ಲದೇ ಸಂಚು ರೂಪಿಸಿದ್ದರು. ಸಿಲಿಕಾನ್ ಸಿಟಿಯನ್ನ ಉಗ್ರರು ಅಡಗುದಾಣವಾಗಿ ಮಾಡಿಕೊಂಡು ವಿಧ್ವಂಸಕ ಕೃತ್ಯವೆಸಗಲು ಖತರ್ನಾಕ್ ಪ್ಲ್ಯಾನ್ ಮಾಡಿಟ್ಟುಕೊಂಡಿದ್ದರು. ಆದ್ರೆ ರಾಷ್ಟ್ರೀಯ ತನಿಖಾ ದಳ ಶಂಕಿತ ಉಗ್ರರ ಹೆಡೆಮುರಿ ಕಟ್ಟಿದೆ.ಕೆಲ ತಿಂಗಳ ಹಿಂದೆ ನಗರದ ಬಸವನಗುಡಿಯ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ಉಗ್ರ ವೈದ್ಯ ಅಬ್ದುಲ್ ರೆಹಮಾನ್‌ನನ್ನು NIA ಬಂಧಿಸಿತ್ತು.ಕಾರ್ಯಾಚರಣೆ ನಡೆಸಿದ NIA, ತಮಿಳುನಾಡು ಮೂಲದ ಆಹ್ಮದ್ ಅಬ್ದುಲ್ ಖಾದರ್ ಹಾಗೂ ಫ್ರೇಜರ್ ಟೌನ್‌ನ ಇರ್ಫಾನ್ ನಾಸೀರ್‌ನನ್ನ ಬಂಧಿಸಿದೆ. ಸದ್ಯ ರಾಷ್ಟ್ರೀಯ ತನಿಖಾ ದಳ ಬಂಧಿತರ ವಿಚಾರಣೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರರು ರಾಜಧಾನಿಯಲ್ಲಿ ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.