ಹತ್ರಾಸ್‍ನಲ್ಲಿ ನಿಲ್ಲದ ದುರುಳರ ವಿಕೃತಿ ➤ ಅತ್ಯಾಚಾರಕ್ಕೊಳಕ್ಕಾಗಿ 6 ವರ್ಷದ ಬಾಲಕಿ ಮೃತ್ಯು.!



 (ನ್ಯೂಸ್ ಕಡಬ) newskadaba.com ಆಲಿಗಡ, ಅ. 07: ಹಾಥರಸ್‌ನಲ್ಲಿ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ ಮಾಸುವ ಮುನ್ನವೇ ಅದೇ ಜಿಲ್ಲೆಯಲ್ಲಿನ ಆರು ವರ್ಷದ ಬಾಲಕಿ ತನ್ನ ಸಂಬಂಧಿಯಿಂದಲೇ ಅತ್ಯಾಚಾರಕ್ಕೊಳಗಾಗಿದ್ದಾಳೆ.





 

ಚಿಕಿತ್ಸೆ ವೇಳೆ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ. ಹಾಥರಸ್‌ನ ಸದಾಬಾದ್ ಪ್ರದೇಶದ ಜಟೋಯಿ ಗ್ರಾಮದ ನಿವಾಸಿಯಾಗಿದ್ದ ಅಪ್ರಾಪ್ತೆಯು ಆಲಿಗಡ ಜಿಲ್ಲೆಯ ಇಗ್ಲಾಸ್ ಪ್ರದೇಶದ ಸಂಬಂಧಿಕರ ಮನೆಯಲ್ಲಿದ್ದಾಗ ಅತ್ಯಾಚಾರಕ್ಕೊಳಗಾಗಿದ್ದಳು. ಬಳಿಕ ಸೆಪ್ಟೆಂಬರ್‌ 17ರಂದು ಆಕೆಯನ್ನು ರಕ್ಷಿಸಲಾಗಿತ್ತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮುನಿರಾಜ್ ಜಿ ಜಿ ತಿಳಿಸಿದ್ದಾರೆ.






error: Content is protected !!
Scroll to Top