ರಾತ್ರೋ ರಾತ್ರಿ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ ➤ ಏನು ಕಾರಣ ನೀಡಿದೆ ಗೊತ್ತ ಯುಪಿ ಸರ್ಕಾರ.?

(ನ್ಯೂಸ್ ಕಡಬ) newskadaba.com ಹತ್ರಾಸ್ , ಅ. 06.:ಲಕ್ನೋ: ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಮೃತದೇಹವನ್ನು ರಾತ್ರೋ ರಾತ್ರಿ ಅಂತ್ಯ ಸಂಸ್ಕಾರ ಮಾಡಿದ್ದಕ್ಕೆ ಕಾರಣವೇನೆಂದು ಯುಪಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಮಜಾಯಿಷಿ ನೀಡಿದೆ.

ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಯೋಗಿ ಸರ್ಕಾರ ಅಂತ್ಯಸಂಸ್ಕಾರದ ಕಾರಣ ವಿವರಿಸಿದೆ. ‘ಪ್ರಕರಣ ಜಾತಿಯ ತಿರುವು ಪಡೆಯುತ್ತಿತ್ತು. ಇಂತಹ ಸಂದರ್ಭದಲ್ಲಿ ಸಾರ್ವಜನಿಕವಾಗಿ ಅಂತ್ಯ ಸಂಸ್ಕಾರ ಮಾಡಿದರೆ ಹಿಂಸಾಚಾರ ನಡೆಯುವ ಸಾಧ‍್ಯತೆಯಿತ್ತು. ಹೀಗಾಗಿ ಸಾರ್ವಜನಿಕರನ್ನು ದೂರವಿಟ್ಟು ರಾತ್ರೋ ರಾತ್ರಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಯುಪಿ ಸರ್ಕಾರ ಸಮಜಾಯಿಷಿ ನೀಡಿದೆ.

Also Read  ಗಣರಾಜ್ಯೋತ್ಸವದ ಧ್ವಜಾರೋಹಣ ನಡೆಸಿ ವಾಪಾಸ್ಸಾಗುವಾಗ ರಸ್ತೆ ಅಪಘಾತ ! ➤ ಪಿಡಿಒಗೆ ಗಂಭೀರ ಗಾಯ

error: Content is protected !!
Scroll to Top