ಅಕ್ರಮ ಸಂಬಂಧಕ್ಕೆ ಅಡ್ಡಿಯಾದ 6ವರ್ಷದ ಪುತ್ರ ➤ ಪ್ರಿಯಕರನ ಜೊತೆ ಸೇರಿ ಪುತ್ರನ ಹತ್ಯೆಗೈದ ತಾಯಿ.!!

(ನ್ಯೂಸ್ ಕಡಬ) newskadaba.com ಗುಜರಾತ್, ಅ. 06. ಅಕ್ರಮ ಸಂಬಂಧಕ್ಕಾಗಿ ತಾಯಿಯೇ ತನ್ನ 6 ವರ್ಷದ ಮಗನನ್ನು ಪ್ರಿಯಕರನ ಜೊತೆ ಸೇರಿಕೊಂಡು ಹತ್ಯೆ ಮಾಡಿದ ಘಟನೆ ಗುಜರಾತ್ ನ ಬನಾಸ್ ಕಾಂತಾ ಜಿಲ್ಲೆಯಲ್ಲಿ ನಡೆದಿದೆ. ಮೃತ ಬಾಲಕನನ್ನು ಜಗದೀಶ್ ಠಾಕೂರ್ ಎಂದು ಗುರುತಿಸಲಾಗಿದೆ.

ರಾಜುಲ್ ಎಂಬಾಕೆ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಮಗನ ಹತ್ಯೆ ಮಾಡಿದ್ದು ಇಬ್ಬರೂ ಪೊಲೀಸರ ವಶದಲ್ಲಿದ್ದಾರೆ.ರಾಜುಲ್ ಹಾಗೂ ಆಕೆಯ ಪ್ರಿಯಕರ ಠಾಕೂರ್ ಅಕ್ರಮ ಸಂಬಂಧದಲ್ಲಿ ತೊಡಗಿದ್ದನ್ನ ಆಕೆಯ 6 ವರ್ಷದ ಪುತ್ರ ನೋಡಿದ್ದಾನೆ. ಹಾಗೂ ತಂದೆಗೆ ಈ ವಿಚಾರ ತಿಳಿಸಿದ್ದಾನೆ . ಇದರಿಂದ ರೊಚ್ಚಿಗೆದ್ದ ಆರೋಪಿ ರಾಜುಲ್ ಹಾಗೂ ಪ್ರಿಯಕರ ಠಾಕೂರ್ ಮರುದಿನವೇ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ. ಮಗ ನಾಪತ್ತೆಯಗಿರುವ ಬಗ್ಗೆ ತಂದೆ ಹುಡುಕಾಟ ನಡೆಸಿದಾಗ ಹೊಲವೊಂದರಲ್ಲಿ ರಕ್ತದ ಮಡುವಿನಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದೆ. ಬಳಿಕ ಬಾಲಕನ ತಂದೆ ಪೊಲೀಸರಿಗೆ ತಿಳಿಸಿದ್ದಾರೆ ಆತನ ದೂರಿನ ಆಧಾರದ ಮೇಲೆ ಆರೋಪಿ ರಾಜುಲ್ ಹಾಗೂ ಪ್ರಿಯಕರ ಠಾಕೂರ್‍ನನ್ನು ಪೊಲೀಸರು ಬಂಧಿಸಿದ್ದಾರೆ.

Also Read  ಸುಬ್ರಹ್ಮಣ್ಯ: ಕುಮಾರದಾರ ನದಿಗೆ‌ ಹಾರಲೆತ್ನಿಸಿದ ವೃದ್ದ ➤ ರಕ್ಷಿಸಿದ ಬಜರಂಗದಳ ಕಾರ್ಯಕರ್ತ

 

 

 

error: Content is protected !!
Scroll to Top