(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.22. ನಿಮ್ಮ ಬಳಿ ಹಳೆಯ, ವಿಭಿನ್ನ ರೀತಿಯ ಎರಡು ರೂಪಾಯಿಯ ನಾಣ್ಯವಿದೆಯೇ…? ಹಾಗಿದ್ರೆ ಈ ಎರಡು ರೂಪಾಯಿಯ ಹಳೆ ನಾಣ್ಯವು ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡಬಹುದು.
ಎರಡು ರೂಪಾಯಿಯ ಈ ವಿಶಿಷ್ಟ ನಾಣ್ಯಗಳು ಈಗ ಬಹಳ ಜನಪ್ರಿಯವಾಗಿದ್ದು ಬಹಳ ಬೇಡಿಕೆ ಬಂದಿದೆ. ಇತ್ತೀಚಿಗೆ 2 ರೂಪಾಯಿ ಹಳೆಯ ನಾಣ್ಯವನ್ನು 3 ಲಕ್ಷ ರೂಪಾಯಿಗೆ ಹೈದರಾಬಾದ್ ನ ಆರ್ಟ್ ಗ್ಯಾಲರಿಯ ಹೊರಗೆ ಹರಾಜು ಮಾಡಲಾಗಿತ್ತು. 1990ರ ಹಿಂದಿನ ಎರಡು ರುಪಾಯಿಯ ನಾಣ್ಯಗಳು ಮುಂಬೈನಲ್ಲಿ ಜನಪ್ರಿಯವಾಗಿವೆ. ಮುಂಬೈ ಮಿಂಟ್ ನಿಂದ ತಯಾರು ಮಾಡಿರುವ ಈ ನಾಣ್ಯವು ವಜ್ರದ ಗುರುತನ್ನು ಹೊಂದಿದೆ. ನೀವು ಅಂತಹ ಗುರುತುಗಳುಳ್ಳ ನಾಣ್ಯಗಳನ್ನು ಹೊಂದಿದ್ದರೆ, ನೀವು ಬಹಳಷ್ಟು ಖರೀದಿದಾರರನ್ನು ಪಡೆದು ಹಣವನ್ನು ಕೂಡ ಪಡೆಯಬಹುದು.
ಹಳೆಯ ವಸ್ತುಗಳ ಹರಾಜಿನಲ್ಲಿ ನಾಣ್ಯ ಖರೀದಿದಾರರು ಬರುತ್ತಾರೆ. ಆನ್ಲೈನ್ ನಲ್ಲಿ ಕೂಡ ಈ ಹಳೆ ನಾಣ್ಯಗಳ ಖರೀದಿ ನಡೆಯುತ್ತದೆ. OLX ಮತ್ತು Quickr ಗಲ್ಲಿ ಕೂಡ ಡೈಮಂಡ್ ಮಾರ್ಕ್ ಇರುವ ಎರಡು ರೂಪಾಯಿಗಳ ಹಳೆ ನಾಣ್ಯಗಳ ಖರೀದಿಯನ್ನು ಮಾಡುತ್ತಿದ್ದಾರೆ.