ಮತ್ತೊಂದು ಡೆಡ್ಲಿ ವೈರಸ್ ಅಟ್ಯಾಕ್ ➤ ನೀರಿನಲ್ಲಿ ಕಂಡು ಬಂತು ಮನುಷ್ಯರ ಮೆದುಳು ತಿನ್ನುವ ಅಮಿಬಾ..!!

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಸೆ. 29. ಟೆಕ್ಸಾಸ್‌ನ ಲೇಕ್ ಜಾಕ್ಸನ್ ನಗರದ ಸಾರ್ವಜನಿಕ ಕೊಳಾಯಿಗಳಲ್ಲಿ ಈ ಡೆಡ್ಲಿ ಮೈಕ್ರೋಬ್ಸ್ ಪತ್ತೆಯಾಗಿವೆ. ‘ನಾಗ್ಲೆರಿಯಾ ಫೌಲೆರಿ’ (Naegleria fowleri) ಎಂದು ಕರೆಯಲಾಗುವ, ಅಮೀಬಾ ವಂಶಕ್ಕೆ ಸೇರಿದ ಈ ಸೂಕ್ಷ್ಮಾಣು ಜೀವಿಗಳಿಗೆ ಮನುಷ್ಯರ ಮೆದುಳು ತಿನ್ನುವುದೇ ಕೆಲಸ.ಅಮೆರಿಕದ ಟೆಕ್ಸಾಸ್‌ನಲ್ಲಿ ಮನಷ್ಯರ ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿ ಪತ್ತೆಯಾಗಿದ್ದು, ಕೊಳಾಯಿ ನೀರು ಬಳಸದಂತೆ ಎಚ್ಚರಿಕೆ ನೀಡಲಾಗಿದೆ.ಇವು ಏಕಕೋಶ ಜೀವಿಗಳಾಗಿದ್ದು, ಮನುಷ್ಯನ ಮೂಗಿನ ಮೂಲಕ ಪ್ರವೇಶ ಮಾಡಿ ಮೆದುಳನ್ನು ತಿಂದು ಮನುಷ್ಯನ ಸಾವಿಗೆ ಕಾರಣವಾಗುತ್ತವೆ.

 

ಕಳೆದ ತಿಂಗಳು ಲೇಕ್ ಜಾಕ್ಸನ್ ನಗರದಲ್ಲಿ ಬಾಲಕನೊಬ್ಬ ಅನುಮಾನಾಸ್ಪದ ಸೋಂಕಿನಿಂದ ಮೃತಪಟ್ಟಿದ್ದ. ಬಾಲಕನ ದೇಹವನ್ನು ಪರೀಕ್ಷೆಗೆ ಒಳಪಡಿಸಿ ವರದಿ ಪಡೆದ ವೈದ್ಯರಿಗೆ ಶಾಕ್ ಕಾದಿತ್ತು. ಏಕೆಂದರೆ ಈ ಬಾಲಕ ಮೃತಪಟ್ಟಿದ್ದು ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿಯಿಂದ.ಲೇಕ್ ಜಾನ್ಸನ್‌ನ ಕೊಳಾಯಿಗಳಲ್ಲಿ ಮೆದುಳು ತಿನ್ನುವ ಅಮೀಬಾ ಪತ್ತೆಯಾಗಿದೆ.ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಅಮೀಬಾ ಅದೆಷ್ಟು ಡೇಂಜರಸ್ ಎಂದರೆ, ಈ ಸೋಂಕಿಗೆ ಸರಿಯಾದ ಔಷಧಗಳೇ ಲಭ್ಯವಿಲ್ಲ.

Also Read  ಸೇನಾ ಹೆಲಿಕಾಪ್ಟರ್ ಪತನ - ನಾಲ್ವರು ಸಿಬ್ಬಂದಿಗಳು ನಾಪತ್ತೆ !!

ಅಕಸ್ಮಾತ್ ನಾಗ್ಲೆರಿಯಾ ಫೌಲೆರಿ ಮನುಷ್ಯನ ಮೆದುಳು ಸೇರಿದಂತೆ, ಆ ಕ್ಷಣದಿಂದಲೇ ಮೆದುಳಿನ ಮೇಲೆ ದಾಳಿ ಮಾಡಿ ತಿನ್ನಲು ಆರಂಭಿಸುತ್ತದೆ. ಕೇವಲ ಒಂದು ವಾರದಲ್ಲಿ ಆತನ ಜೀವವನ್ನೇ ತೆಗೆದುಬಿಡುತ್ತದೆ. ಆದರೆ ಇದ್ಯಾವುದೂ ಸೋಂಕಿತನ ಗಮನಕ್ಕೆ ಬರುವುದೇ ಇಲ್ಲ. ಅಷ್ಟರಮಟ್ಟಿಗೆ ಖತರ್ನಾಕ್ ಈ ನಾಗ್ಲೆರಿಯಾ ಫೌಲೆರಿ ಸೂಕ್ಷ್ಮಾಣು ಜೀವಿಗಳು.ಸೂಕ್ಷ್ಮಾಣು ಜೀವಿ ತನ್ನ ಕೆಲಸ ಆರಂಭಿಸಿದ ಒಂದೆರಡು ದಿನಗಳಲ್ಲಿ ತೀವ್ರ ಜ್ವರ ಹಾಗೂ ತಲೆನೋವು ಕಾಡಲು ಆರಂಭವಾಗುತ್ತದೆ.

ಹೀಗೆ ಆರಂಭವಾಗುವ ಸೋಂಕಿನ ಲಕ್ಷಣ, ಭಾರಿ ಪ್ರಮಾಣದಲ್ಲಿ ವಾಂತಿಯಾಗುವಂತೆ ಮಾಡುತ್ತದೆ. ಮೂಗಿನಲ್ಲಿ ನೀರು ಹೋದರೆ ಇಂತಹ ಮೈಕ್ರೋಬ್‌ಗಳು ಮೆದುಳು ಸೇರುವುದು ತುಂಬಾ ಸುಲಭ. ಹೀಗೆ ಮೆದುಳು ಸೇರುವ ಸೂಕ್ಷ್ಮಾಣು ಜೀವಿ ನಾಗ್ಲೆರಿಯಾ ಫೌಲೆರಿ ತಕ್ಷಣ ಮೆದುಳನ್ನ ತಿನ್ನಲು ಶುರುಮಾಡುತ್ತದೆ.ಹೀಗಾಗಿ ಮೂಗಿನ ಒಳಗೆ ನೀರು ಸೇರಿಸಬೇಡಿ ಎಂದು ಟೆಕ್ಸಾಸ್ ಸ್ಟೇಟ್‌ನ ಜನರಿಗೆ ಅಮೆರಿಕದ ಅಧಿಕಾರಿಗಳು ವಾರ್ನಿಂಗ್ ಕೊಟ್ಟಿದ್ದಾರೆ.

Also Read  ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ

error: Content is protected !!
Scroll to Top