10 ದಿನಕ್ಕೆ ಗಂಡನ ವಿರುದ್ಧ ದೂರು ದಾಖಲಿಸಿದ ನಟಿ ಪೂನಂ ಪಾಂಡೆ!

(ನ್ಯೂಸ್ ಕಡಬ) newskadaba.com ಮುಂಬೈ, ಸೆ. 23:  ಬಾಲಿವುಡ್‌ ಜಗತ್ತಿನ ಮಾದಕ ನಟಿ ಪೂನಂ ಪಾಂಡೆ ಕಳೆದ 12 ದಿನಗಳ ಹಿಂದೆ ಬಹುಕಾಲದ ಗೆಳೆಯ ಸ್ಯಾಮ್ ಬೊಂಬೆ ಜೊತೆ ಮದುವೆಯಾಗಿದ್ದರು. ಆದರೆ ಈಗ ಅವರೇ ಗಂಡನ ವಿರುದ್ಧ ದೂರು ದಾಖಲಿಸಿ ಅರೆಸ್ಟ್ ಮಾಡಿಸಿದ್ದಾರೆ

ಬಾಲಿವುಡ್ ನಟಿ ಪೂನಂ ಪಾಂಡೆ ಗಂಡ ಸ್ಯಾಮ್ ಬಾಂಬೆಯನ್ನು ಗೋವಾದಲ್ಲಿ ಅರೆಸ್ಟ್ ಮಾಡಲಾಗಿದೆ. ಪೂನಂಗೆ ಕಿರುಕುಳ ಕೊಟ್ಟು ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾನೆ ಎಂದು ಪೂನಂ ಆರೋಪ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಗೋವಾದಲ್ಲಿ ಪೂನಂ ಪಾಂಡೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ವೇಳೆ ಈ ಘಟನೆ ನಡೆದಿದೆ.

Also Read  ಉಪ್ಪಿನಂಗಡಿ: ಚಲಿಸುತ್ತಿದ್ದ ರಿಕ್ಷಾದ ಮೇಲೆ ಉರುಳಿಬಿದ್ದ ಬೃಹತ್ ಮರ ➤ ಮಹಿಳೆಗೆ ಗಂಭೀರ ಗಾಯ

 

 

 

ಸೋಮವಾರ ರಾತ್ರಿ ಪೂನಂ ಪಾಂಡೆ ದೂರು ದಾಖಲಿಸಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಹನಿಮೂನ್ ಫೋಟೋ, ವಿಡಿಯೋಗಳನ್ನು ಪೂನಂ ಪಾಂಡೆ ಶೇರ್ ಮಾಡಿಕೊಂಡು, ‘ದಿ ಬೆಸ್ಟ್ ಹನಿಮೂನ್’ ಎಂದು ಕ್ಯಾಪ್ಶನ್ ನೀಡಿದ್ದರು. ಇದೀಗ ಗಂಡನನ್ನೇ ದೂರಿದ್ದಲ್ಲದೆ,ಅರೆಸ್ಟ್ ಮಾಡಿಸಿದ್ದಾರೆ ಸೆಪ್ಟೆಂಬರ್ 11, 2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಪೂನಂ, ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ‘ನಿಮ್ಮೊಂದಿಗೆ ಏಳು ಜನ್ಮ ಎದುರು ನೋಡುತ್ತಿದ್ದೇನೆ’ ಎಂದು ಕ್ಯಾಪ್ಶನ್ ನೀಡಿದ್ದರು.

 

error: Content is protected !!
Scroll to Top