ಬೃಹತ್ ಪ್ರಮಾಣದ ಗಾಂಜಾ ಸಾಗಾಟ ➤ ಮೂವರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಸೆ. 23. ಆಂಧ್ರಪ್ರದೇಶದಿಂದ ಕೇರಳಕ್ಕೆಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 1 ಕೋಟಿ ರೂ. ಮೌಲ್ಯದ ಗಾಂಜಾವನ್ನು ಕೇರಳ ರಾಜ್ಯ ಅಬಕಾರಿ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದು, ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ತಿರುವನಂತಪುರಂ ನಲ್ಲಿ ನಡೆದಿದೆ.

 


ಆರೋಪಿಗಳನ್ನು ಜೋಮಿತ್​​ (38), ಸುರೇಶ್​​ ಕುಮಾರ್​ (32) ಮತ್ತು ವಿತಿನ್​ ರಾಜ್​ (30) ಎಂದು ಗುರುತಿಸಲಾಗಿದೆ. ಭಾರೀ ಪ್ರಮಾಣದ ಗಾಂಜಾವನ್ನು ಆರೋಪಿಗಳು ಎರಡು ಕಾರಿನಲ್ಲಿ ತುಂಬಿಕೊಂಡು ಆಂಧ್ರ ಪ್ರದೇಶದಿಂದ ಬೆಂಗಳೂರು ಮಾರ್ಗವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ವೇಳೆ ಬಲರಾಮಪುರಂ ಎಂಬಲ್ಲಿ ಕಾರುಗಳನ್ನು ತಡೆದ ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Also Read  150 ವರ್ಷಗಳ ಇತಿಹಾಸವಿರುವ ಟ್ರಾಮ್ ರೈಲು ಸೇವೆ ಸ್ಥಗಿತ

ಆರೋಪಿಗಳಲ್ಲಿ ಸುರೇಶ್​ ಕುಮಾರ್​ ಎಂಬಾತ ತಿರುವನಂತಪುರಂ ಮತ್ತು ಕೊಲ್ಲಂನಲ್ಲಿ ದಾಖಲಿಸಲಾಗಿರುವ ಕೊಲೆ ಪ್ರಕರಣದ ಆರೋಪಿ ಎಂದು ಈ ವೇಳೆ ತಿಳಿದು ಬಂದಿದೆ. ಆರೋಪಿಗಳ ಸಹಿತ ಗಾಂಜಾ​ ಸಾಗಾಟಕ್ಕೆ ಬಳಸಿಕೊಂಡಿದ್ದ ಎರಡು ಇನ್ನೋವಾ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!
Scroll to Top