(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23: 18 ವರ್ಷದ ಹುಡುಗಿಗೆ ಹುಡುಗನೊಬ್ಬ ಲೈಂಗಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಆತನನ್ನು ಪೋಲಿಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪೋಷಕರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಇದ್ದ ಹುಡುಗಿಯನ್ನು ನೆಪವೊಡ್ಡಿ ಕರೆದೊಯ್ದ ಹುಡುಗ ಆಕೆಗೆ ಕಿರುಕುಳ ನೀಡಿದ್ದಾನೆ. ಇದನ್ನು ನೋಡಿದ ನೆರೆಹೊರೆಯವನೊಬ್ಬ ಪ್ರಶ್ನಿಸಿದಾಗ ಆತನ ಬಳಿ ಕೆಳಗೆ ಬಿದ್ದ ಆಕೆಗೆ ಸಹಾಯ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದಾನೆ. ಬಳಿಕ ಮನೆಗೆ ಬಂದ ಹುಡುಗಿಯ ಮೈ ಮೇಲೆ ಗಾಯಗಳನ್ನು ಕಂಡು ಆಕೆಯನ್ನು ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆಯ ಮೇಲೆ ದೌರ್ಜನ್ಯ ನಡೆದಿರುವುದು ತಿಳಿದುಬಂದಿದೆ.ಪೊಲೀಸರು ಆರೋಪಿ ಹುಡುಗನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.