ಮೂವರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ

(ನ್ಯೂಸ್ ಕಡಬ) newskadaba.com ಶ್ರೀನಗರ, ಸೆ. 17. ಹಲವು ಸಮಯಗಳಿಂದ ಉಗ್ರರನ್ನು ಕಾರ್ಯಾಚರಣೆಯ ಮೂಲಕ ಸದೆಬಡಿಯುತ್ತಿರುವ ಸೇನಾಪಡೆಯು ಜಮ್ಮು, ಕಾಶ್ಮೀರದ ಶ್ರೀನಗರದ ಬಟಾಮಲೂ ಎಂಬ ಪ್ರದೇಶದಲ್ಲಿ ಮೂವರು ಉಗ್ರರನ್ನು ಗುರುವಾರ ಹತ್ಯೆಗೈದಿದೆ.

ಈ ಪ್ರದೇಶದಲ್ಲಿ ಉಗ್ರರ ನುಸುಳಿಕೆ ಹಾಗೂ ಸಂಶಯಾಸ್ಪದ ಓಡಾಟಗಳ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆ ಗುರುವಾರ ಬೆಳಗ್ಗೆಯೇ ಕಾರ್ಯಚರಣೆಗಿಳಿದ ಭದ್ರತಾಪಡೆಗಳು ಮೂವರು ಉಗ್ರರ ಸದೆಬಡಿದಿದೆ. ಕಾರ್ಯಚರಣೆ ಶುರುವಾಗುತ್ತಿದ್ದಂತೆಯೇ ಯೋಧರ ಮೇಲೆ ಶತ್ರುಪಡೆ ಗುಂಡಿನ ದಾಳಿ ನಡೆಸಿದ್ದು, ತಕ್ಷಣ ಕಾರ್ಯಾಚರಣೆಯನ್ನು ಎನ್‌ ಕೌಂಟರ್‌ ಆಗಿ ಪರಿವರ್ತಿಸಿದ ಸೇನಾಪಡೆಗಳು ಮೂವರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಲಾಗಿದೆ.

Also Read  ಶ್ರೀ ಆಂಜನೇಯ ಸ್ವಾಮಿ ಗೆ ಇಷ್ಟವಾದ ಈ 4 ವಸ್ತುಗಳನ್ನು ಅರ್ಪಿಸಿ ನಿಮ್ಮ ಜೀವನದ ಕಷ್ಟಗಳನ್ನು ಪರಿಹರಿಸಿಕೊಳ್ಳಿ

error: Content is protected !!
Scroll to Top