ಸ್ಯಾಂಡಲ್​ವುಡ್​​ ಡ್ರಗ್ಸ್​ ಪ್ರಕರಣ ಹಿನ್ನಲೆ ➤ ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ ಐಂದ್ರಿತಾ ರೇ.

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.16:  ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣಕ್ಕೆ ಸಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನಿನ್ನೆ ಸ್ಟಾರ್​ ದಂಪತಿ ಐಂದ್ರಿತಾ ಹಾಗೂ ದಿಗಂತ್ ದಂಪತಿಗೆ ನೋಟಿಸ್​ ನೀಡಿದೆ. ಈ ಕುರಿತಾಗಿ ಐಂದ್ರಿತಾ ರೇ ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.ಐಂದ್ರಿತಾ ರೇ ಹಾಗೂ ದಿಗಂತ್​ ಇನ್ನೇನು ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ.

 

ಕೋವಿಡ್​ನಿಂದಾಗಿ ಈಗ ಜನರು ಎಲ್ಲೂ ಹೆಚ್ಚಾಗಿ ಅಡ್ಡಾಡುತ್ತಿಲ್ಲ. ಇದೇ ಕಾರಣದಿಂದ ಇರಬೇಕು, ಸಿಸಿಬಿ ಪೊಲೀಶರು ದಿಗಂತ್​ ಹಾಗೂ ಐಂದ್ರಿತಾಗೆ ಫೋನ್​ ಕರೆ ಮಾಡುವ ಮೂಲಕ ಸಮನ್ಸ್​ ಕೊಟಿದ್ದಾರಂತೆ.ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಪ್ರಕರಣ ಸದ್ದು ಮಾಡಲಾರಂಭಿಸಿದ ನಂತರ ರಾಗಿಣಿ ಹಾಗೂ ಸಂಜನಾ ಅವರನ್ನು ಬಂಧಿಸಲಾಯಿತು. ಈಗ ಇದೇ ವಿಷಯವಾಗಿ ದಿಗಂತ್​ ಹಾಗೂ ಐಂದ್ರಿತಾ ಅವರಿಗೂ ಸಿಸಿಬಿ ವಿಚಾರಣೆಗೆ ಕರೆದಿದೆ.ಈ ಕುರಿತಾಗಿ ಐಂದ್ರಿತಾ ರೇ ಟ್ವೀಟ್​ ಮಾಡಿದ್ದು, ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.ಸಿಸಿಬಿ ಪೊಲೀಸರು 11ಕ್ಕೆ ವಿಚಾರಣೆಗೆ ಕರೆದಿದ್ದಾರೆ. ನಾವೂ ಹೋಗುತ್ತಿದ್ದು, ಸಂಪೂರ್ಣವಾಗಿ ಸಹಕರಿಸಲಿದ್ದೇವೆ ಎಂದು ಟ್ವೀಟ್​ ಮಾಡಿದ್ದಾರೆ ಐಂದ್ರಿತಾ ರೇ.ಸಿಸಿಬಿ ಪೊಲೀಸರು ನೋಟಿಸ್​ ನೀಡಿದ ನಂತರವೂ ಐಂದ್ರಿತಾ ಸಾಮಾಜಿಕ ಜಾಲತಾಣದಲ್ಲಿ ಎಂದಿನಂತೆ ಸಕ್ರಿಯವಾಗಿದ್ದಾರೆ.

Also Read  ಅನಿಶಾ ಪೂಜಾರಿ ಆತ್ಮಹತ್ಯೆ ಪ್ರಕರಣ ➤ CID ಗೆ ಒಪ್ಪಿಸಲು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ

 

error: Content is protected !!
Scroll to Top