► ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಪೊಲೀಸ್ ಬಲೆಗೆ

(ನ್ಯೂಸ್ ಕಡಬ) newskadaba.com ಮುಂಬೈ, ಸೆ.19. ಮೋಸ್ಟ್ ವಾಂಟೆಡ್ ಉಗ್ರ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕಿರಿಯ ಸಹೋದರ
ಇಕ್ಬಾಲ್‌ ಕಸ್ಕರ್‌ ಮಹಾರಾಷ್ಟ್ರದ ಎನ್​ಕೌಂಟರ್​ ಸ್ಪೆಷಲಿಸ್ಟ್​ ಪ್ರದೀಪ್ ಶರ್ಮಾ ನೇತೃತ್ವದಲ್ಲಿ ಥಾಣೆಯ ಆಂಟಿ-ಎಕ್​ಸ್ಟಾರ್ಶನ್ ಸೆಲ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.

‌ಮುಂಬೈನ ನಗ್ಪದಾ ಪ್ರದೇಶದಲ್ಲಿ ಅಡಗಿದ್ದ ಇಕ್ಬಾಲ್‌ ಕಸ್ಕರ್ ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ದೊಡ್ಡ-ದೊಡ್ಡ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಈತ ಥಾಣೆ, ಉಲ್ಲಾಸ್​ನಗರ್, ದೊಂಬಿವ್ಲಿ ಪ್ರದೇಶಗಳಲ್ಲಿ ಉದ್ಯಮಿಗಳು ಹಾಗೂ ಬಿಲ್ಡರ್​ಗಳನ್ನ ಹೆದರಿಸಿ, ಅವರಿಂದ ಕೋಟ್ಯಾಂತರ ರೂಪಾಯಿ ಹಣ ದೋಚಿದ್ದ. ಉದ್ಯಮಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಇಕ್ಬಾಲ್ ಬಂಧನಕ್ಕೆ ಮಹಾರಾಷ್ಟ್ರ ಪೊಲೀಸರು ಬಲೆ ಬೀಸಿದ್ದರು.

Also Read  ಗಡಿಯಲ್ಲಿ ಕಳ್ಳಸಾಗಣೆ ➤ ಡ್ರಗ್ಸ್, ಶಸ್ತ್ರಾಸ್ತ್ರ ವಶಕ್ಕೆ ಪಡೆದ BFF

error: Content is protected !!
Scroll to Top