ಕಡಬ: ನಾಪತ್ತೆಯಾಗಿದ್ದ ಯುವತಿ ಮದುವೆಯಾಗಿ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಆ.28. ಐಸ್ ಕ್ರೀಮ್ ಫ್ಯಾಕ್ಟರಿಗೆ ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಯುವತಿ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿ ಪ್ರತ್ಯಕ್ಷಳಾಗಿದ್ದಾಳೆ.

ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ದೇವಸ್ಯ ನಿವಾಸಿ ತೀರ್ಥಲತಾ(20) ಎಂಬಾಕೆ ಮಂಗಳೂರಿನ ಐಸ್ ಕ್ರೀಮ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆಂದು ಆಗಸ್ಟ್ 22 ರಂದು ತೆರಳಿದ್ದು, ಆ ಬಳಿಕ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಳು ಎನ್ನಲಾಗಿದೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿ ಪತ್ತೆಯಾಗದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಕಡಬ ಠಾಣೆಗೆ ದೂರು ನೀಡಿದ್ದರು. ಗುರುವಾರದಂದು ಆಕೆಯ ಪ್ರಿಯಕರನೊಂದಿಗೆ ಮದುವೆಯಾಗಿದ್ದು, ಜೋಡಿಯನ್ನು ಕರೆತರಲು ಕಡಬ ಪೊಲೀಸರು ತೆರಳಿದ್ದಾರೆ.

Scroll to Top