ಕಾರವಾರ: ಸ್ನಾನ ಮಾಡುತ್ತಿದ್ದ ಆರು ಜನ ನೀರುಪಾಲು



(ನ್ಯೂಸ್ ಕಡಬ) newskadaba.com ಕಾರವಾರ, ಸೆ.17. ಗೋವಾದಿಂದ ಪ್ರವಾಸಕ್ಕೆಂದು ಬಂದಿದ್ದ ಆರು ಮಂದಿ ಪ್ರವಾಸಿಗರು ಜಲಪಾತದಲ್ಲಿ ಈಜುವ ವೇಳೆ ನೀರಿನ ರಭಸಕ್ಕೆ ನೀರುಪಾಲಾದ ಘಟನೆ ಕಾರವಾರ ತಾಲೂಕಿನ ಚೆಂಡಿಯಾ ಎಂಬಲ್ಲಿ ರವಿವಾರದಂದು ನಡೆದಿದೆ.





ನಾಗರ ಮಡಿ ಜಲಪಾತಕ್ಕೆ ಪ್ರವಾಸಕ್ಕೆಂದು ಗೋವಾದ ವಾಸ್ಕೊದಿಂದ ಹಾಗೂ ಮಡಗಾಂವನಿಂದ ಆಗಮಿಸಿದ್ದ ಫ್ರಾನ್ಸಿಲಾ ಪೀರಿಸ್(21), ಫಿಯೋನಾ ಪಾಚಗೋ(26), ಮಸ್ರಿಲ್ಲಿನಾ ಮೆಕ್ಸಿಕ್ಸಾ(26), ರೇಣುಕಾ(23), ಸಿದ್ದು ಚೇರಿ(21) ಹಾಗೂ ಸಮೀರ ಗಾವಡೆ(23)
ನೀರುಪಾಲಾಗಿದ್ದು, ಅದರಲ್ಲಿ ಫ್ರಾನ್ಸಿಲಾ ಪೀರಿಸ್(21), ಫಿಯೋನಾ ಪಾಚಗೋ(26) ಎಂಬವರ ಮೃತದೇಹ ಪತ್ತೆಯಾಗಿದೆ. ಉಳಿದ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.






ಈ ಬಗ್ಗೆ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

error: Content is protected !!
Scroll to Top