ರಕ್ಷಣಾ ವಾಯುಪಡೆ ಮೂಲಕ ನದಿ ನೀರಿನಲ್ಲಿ ಸುಮಾರು 16 ಗಂಟೆಗಳ ಕಾಲ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆ

(ನ್ಯೂಸ್ ಕಡಬ) newskadaba.com ಛತ್ತೀಸ್ ಗಢ, ಆ. 17. ಅಣೆಕಟ್ಟಿನಿಂದ ಹೊರ ಬಿಡಲಾಗಿದ್ದ ನೀರಿಗೆ ವ್ಯಕ್ತಿಯೋರ್ವ ಜಿಗಿದು, ನೀರಿನಿಂದ ದಡಕ್ಕೆ ಬರಲಾಗದೆ ಸುಮಾರು 16 ಗಂಟೆಗಳ ಕಾಲ ನದಿಯ ಬದಿಯಲ್ಲಿರುವ ಮರದ ಕೊಂಬೆಯ ರಕ್ಷಣೆ ಪಡೆದು ಬಳಿಕ ವಾಯುಪಡೆಯ ಸಹಾಯದೊಂದಿಗೆ ವ್ಯಕ್ತಿಯನ್ನು ರಕ್ಷಿಸಿದ ಘಟನೆ ಛತ್ತೀಸ್ ಗಡದ ಬಿಲಾಸ್ಪುರ ದಲ್ಲಿ ರವಿವಾರ ನಡೆದಿದೆ.

 

ಛತ್ತೀಸ್ ಗಡ್ ನ ಬಿಲಾಸ್ ಪುರ ಜಿಲ್ಲೆಯಲ್ಲಿ ರವಿವಾರ ಭಾರಿ ಮಳೆಯಾಗಿದ್ದ ಪರಿಣಾಮ ಜಿಲ್ಲೆಯ ಪ್ರವಾಸಿ ತಾಣವಾದ ಖುತಘಾಟ್ ಅಣೆಕಟ್ಟಿನಲ್ಲಿ ನೀರಿನ ಹರಿವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತಿದ್ದರು. ಆದರೆ, ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಹೆಚ್ಚಾದ ಕಾರಣ ಅಣೆಕಟ್ಟಿನಿಂದ ಹೆಚ್ಚಿನ ನೀರನ್ನು ಹೊರಗೆ ಬಿಡಲಾಗಿದೆ ಈ ಸಂದರ್ಭ ಸ್ಥಳದಲ್ಲಿ ನೆರೆದಿದ್ದ ಪ್ರವಾಸಿಗರಲ್ಲಿ ಓರ್ವ ನೀರಿಗೆ ಜಿಗಿದಿದ್ದು, ಆತನಿಗೆ ಈಜಿ ದಡ ಸೇರಲು ಸಾಧ್ಯವಾಗದೆ ಪ್ರವಾಹದ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಮರದ ಕೊಂಬೆಯನ್ನು ಹಿಡಿದು ವ್ಯಕ್ತಿ ಸಹಾಯಕ್ಕಾಗಿ ಅಂಗಲಾಚಿದ್ದಾನೆ. ನೀರಿನ ಪ್ರವಾಹ ಹೆಚ್ಚಿದ್ದ ಪರಿಣಾಮ ರಕ್ಷಣೆ ಮಾಡುವುದು ಕಷ್ಟದ ಕೆಲಸವಾಗಿತ್ತು ಸ್ಥಳಕ್ಕೆ ಬಿಲಾಸ್ಪುರ ಪೊಲೀಸ್ ಅಧಿಕಾರಿಗಳ ತಂಡ ರಕ್ಷಣೆಗಾಗಿ ತೆರಳಿದ್ದರಾದರೂ ಮಳೆಯ ಅಬ್ಬರ ಜೋರಾಗಿತ್ತು ಹಾಗಾಗಿ ರಕ್ಷಣಾ ಕಾರ್ಯವೂ ಕಷ್ಟವಾಗಿತ್ತು. ಕೂಡಲೇ ಪೊಲೀಸರು ಭಾರತೀಯ ವಾಯುಸೇನೆಯ ನೆರವನ್ನು ಕೇಳಿಕೊಂಡಿದ್ದಾರೆ ಆದರೆ, ಪ್ರತಿಕೂಲ ಹವಾಮಾನ ಇರದ ಪರಿಣಾಮ ಸೋಮವಾರ ಮುಂಜಾನೆ ರಕ್ಷಣಾ ಕಾರ್ಯ ಕೈಗೆತ್ತಿಕೊಳ್ಳಲಾಯಿತು ಸೋಮವಾರ ಬೆಳಿಗ್ಗೆ ವಾಯುಪಡೆಯ ಅಧಿಕಾರಿಗಳು ಮರದ ಸಹಾಯದಿಂದ ವ್ಯಕ್ತಿಯನ್ನು ಹೆಲಿಕಾಪ್ಟರ್ ಸಹಾಯದೊಂದಿಗೆ ರಕ್ಷಣೆ ಮಾಡಿದ್ದಾರೆ.

 

 

error: Content is protected !!

Join the Group

Join WhatsApp Group