10 ವರ್ಷಗಳ ಹಿಂದಿನ ಡೀಸೆಲ್‌ ವಾಹನಗಳ ನಿಷೇಧ ► ಹಸಿರು ನ್ಯಾಯ ಮಂಡಳಿಯ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.15. ರಾಷ್ಟ್ರ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಅತಿಯಾಗಿ ವಾಯುಮಾಲಿನ್ಯ ಸೃಷ್ಟಿಸುವ 10 ವರ್ಷಗಳ ಹಿಂದಿನ ಡೀಸೆಲ್‌ ವಾಹನಗಳ ಮೇಲಿನ ನಿಷೇಧವನ್ನು ತೆರವುಗೊಳಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರಾಕರಿಸಿದೆ.

ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವಾಲಯವು, 10 ವರ್ಷ ಹಿಂದಿನ ಡೀಸೆಲ್ ವಾಹನಗಳ ಬಳಕೆಯಿಂದ ಜನರ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ ಎಂದು ಹೇಳಿ ಈ ವಾಹನಗಳ ಮೇಲೆ ಹಸಿರು ನ್ಯಾಯಾಧೀಕರಣ ಹೇರಿದ್ದ ನಿಷೇಧವನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ವಿಚಾರಣೆ ಬಳಿಕ ಕೇಂದ್ರದ ಅರ್ಜಿಯನ್ನು ತಿರಸ್ಕರಿಸಿ ಹಸಿರು ಪೀಠದ ತೀರ್ಪನ್ನು ಎತ್ತಿ ಹಿಡಿದಿತ್ತು. ಇದರ ವಿಚಾರಣೆ ನಡೆಸಿರುವ ನ್ಯಾಯಮಂಡಳಿ, ಸಚಿವಾಲಯ ತಮ್ಮ ಅರ್ಜಿಗೆ ಸೂಕ್ತ ದಾಖಲೆಗಳನ್ನು ಒದಗಿಸಲು ವಿಫಲವಾಗಿದೆಯಲ್ಲದೆ ಹೊಸ ಡೀಸೆಲ್‌ ಕಾರೊಂದು 24 ಪೆಟ್ರೋಲ್‌ ಹಾಗೂ 84 ಹೊಸ ಸಿಎನ್‌ಜಿ ಕಾರುಗಳು ಉಗುಳುವ ಹೊಗೆಗೆ ಸಮವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ತಿಳಿಸಿದೆ. ಹಾಗಾಗಿ ಸಚಿವಾಲಯದ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಮಂಡಳಿ ಹೇಳಿದೆ.

ಇದೇ ಆಧಾರದ ಮೇಲೆ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವಾಲಯ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿರುವ ನ್ಯಾಯಮೂರ್ತಿ ಸ್ವತಂತರ್ ಕುಮಾರ್‌ ನೇತೃತ್ವದ ಪೀಠ ಹಸಿರು ನ್ಯಾಯಮಂಡಳಿಯ ತೀರ್ಪನ್ನೇ ಎತ್ತಿ ಹಿಡಿದಿದೆ.

error: Content is protected !!

Join the Group

Join WhatsApp Group