ನಿಂತಿಕಲ್ಲು: ತುಂಡಾಗಿ ರಸ್ತೆಗೆ ಬಿದ್ದ ವಿದ್ಯುತ್ ತಂತಿ ➤ ಬೈಕ್ ಸವಾರ ಸಜೀವ ದಹನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ.11. ರಸ್ತೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಆ ರಸ್ತೆಯಾಗಿ ಹೋದ ಬೈಕ್ ಸವಾರನಿಗೆ ತಂತಿ ತಾಗಿ ವಿದ್ಯುತ್ ಪ್ರವಹಿಸಿ ಬೈಕ್ ಸವಾರ ಸಜೀವ ದಹನಗೊಂಡ ಘಟನೆ ನಿಂತಿಕಲ್ಲು ಬಳಿಯ ಕಲ್ಲೇರಿ ಗುಳಿಗನ ಕಟ್ಟೆ ಬಳಿ ಇಂದು ಮುಂಜಾನೆ ನಡೆದಿದೆ.

ಘಟನೆಯಲ್ಲಿ ಸವಾರ ಮತ್ತು ವಾಹನ ಎರಡೂ ಬೆಂಕಿಗಾಹುತಿಯಾಗಿದೆ. ಸಜೀವ ದಹನಗೊಂಡ ವ್ಯಕ್ತಿಯನ್ನು ಮಂಡೆಕೋಲು ಮೂಲದವರು ಎಂದು ಹೇಳಲಾಗಿದೆ. ರಸ್ತೆಯಲ್ಲಿ ಬಾಗಿದ್ದ ಎಚ್.ಟಿ. ಲೈನ್ ಗೆ ಬೈಕ್ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಆ ದಾರಿಯಾಗಿ ಸಾಗುತ್ತಿದ್ದ ಬೈಕ್ ಸವಾರ ಜೀವಂತ ದಹನಗೊಂಡಿದ್ದಾರೆ.

Scroll to Top