(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಸೆ.13. ಕೇಂದ್ರ ಸರಕಾರವು ಪ್ರಥಮ ಬಾರಿಗೆ ಶೀಘ್ರದಲ್ಲೇ 100 ರೂ.ಮುಖಬೆಲೆಯ ನಾಣ್ಯವನ್ನು ಹೊರ ತರಲಿದೆ.
ಎಐಎಡಿಎಂಕೆ ಸ್ಥಾಪಕ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ.ಎಂ.ಜಿ. ರಾಮಚಂದ್ರನ್ ಮತ್ತು ಗಾಯಕಿ ಡಾ.ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಜನ್ಮಶತಮಾನೋತ್ಸವದ ಅಂಗವಾಗಿ ದೇಶದಲ್ಲೇ ಇದೇ ಮೊದಲ ಬಾರಿ ಕೇಂದ್ರ ಸರಕಾರ 100 ರೂ.ನಾಣ್ಯವನ್ನು ಹೊರತರಲು ಉದ್ದೇಶಿಸಿದೆ. ಕೇಂದ್ರ ಹಣಕಾಸು ಸಚಿವಾಲಯ ಈ ಬಗ್ಗೆ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಇದೇ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಡಾ.ಎಂ.ಜಿ. ರಾಮಚಂದ್ರನ್ ಮತ್ತು ಗಾಯಕಿ ಡಾ.ಎಂ.ಎಸ್. ಸುಬ್ಬು ಲಕ್ಷ್ಮೀ ಗೌರವಾರ್ಥವಾಗಿ 5 ರೂ. ಮತ್ತು 10 ರೂ. ನಾಣ್ಯವನ್ನು ಹೊರತರಲಿದೆ.