ದುಷ್ಕರ್ಮಿಗಳ ಗುಂಡಿನ ದಾಳಿಗೆ ಗಾಯಗೊಂಡಿದ್ದ ಪತ್ರಕರ್ತ ಬಲಿ

(ನ್ಯೂಸ್ ಕಡಬ) newskadaba.com ಲಕ್ನೋ, ಜು. 22, ಉತ್ತರ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಡಿ ದಾಳಿಗೆ ಗಾಯಗೊಂಡಿದ್ದ ಪತ್ರಕರ್ತ ವಿಕ್ರಮ್ ಜೋಶಿ ನಿಧನ ಹೊಂದಿದ್ದಾರೆ.

ಘಾಜಿಯಾಬಾದ್ ನಲ್ಲಿ ಪತ್ರಕರ್ತರಾಗಿದ್ದ ವಿಕ್ರಮ್ ಜೋಶಿ ಅವರ ಮೇಲೆ ಅಪರಿಚಿತರು ಜುಲೈ 20 ರಂದು ಗುಂಡಿನ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು 9 ಜನರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Also Read  ➤ಗಾಳಿಪಟ ಹಾರಿಸುವಾಗ ಹೈಟೆನ್ಷನ್ ವೈರ್ ತಗುಲಿ 11 ವರ್ಷದ ಬಾಲಕ ಮೃತ್ಯು..!

error: Content is protected !!
Scroll to Top