ಯುಎಸ್ಎ ಗೆ ಟಿಕೆಟ್ ಆರಂಭಿಸಿದ ಏರ್ ಇಂಡಿಯಾ ➤ ಜುಲೈ 22ರಿಂದ ಆಗಸ್ಟ್‌ 31 ರವರೆಗೂ‌ ಸೇವೆ ಲಭ್ಯ

(ನ್ಯೂಸ್ ಕಡಬ)newskadaba.com ದೆಹಲಿ, ಜುಲೈ 21, ‘ವಂದೇ ಭಾರತ್ ಮಿಷನ್’ ನಾಲ್ಕನೇ ಹಂತದಲ್ಲಿ ಭಾರತದಿಂದ ಅಮೆರಿಕಾಕ್ಕೆ ಅಂತರಾಷ್ಟ್ರೀಯ ವಿಮಾನ ಸಂಚಾರ ಪ್ರಾರಂಭವಾಗುತ್ತಿದ್ದು, ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ.

ಜುಲೈ 22 ರಿಂದ ಆಗಸ್ಟ್ 31ರವರೆಗೂ ಈ ಸೇವೆ ಲಭ್ಯವಿರಲಿದೆ. ಯುಎಸ್‌ಗೆ ತೆರಳಲು ಬಯಸುವ ಪ್ರಯಾಣಿಕರು ಅಧಿಕೃತ ವೆಬ್‌ಸೈಟ್, ಬುಕ್ಕಿಂಗ್ ಕೇಂದ್ರಗಳು ಹಾಗೂ ಟ್ರಾವೆಲ್ ಏಜೆಂಟ್‌ಗಳ ಮೂಲಕ ಟಿಕೆಟ್ ಬುಕ್ ಮಾಡಬಹುದು. ವಿಮಾನಯಾನ ಸಚಿವಾಲಯವು ನಿಗದಿ ಮಾಡಿರುವಂತಹ ಟಿಕೆಟ್ ದರದಲ್ಲಿ ದೇಶೀಯ ಖಾಸಗಿ ವಿಮಾನಗಳು ಹಾಗೂ ಏರ್ ಇಂಡಿಯಾ ವಿಮಾನಗಳಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ.

Also Read  ಕಾಂಗ್ರೆಸ್ ಮುಖಂಡ ಡಿಕೆಶಿಗೆ ಜಾಮೀನು ➤ 50 ದಿನಗಳ ಜೈಲು ವಾಸಕ್ಕೆ ಕೊನೆಗೂ ಮುಕ್ತಿ

ಕೊರೋನಾ ಸೋಂಕು ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸಂಚಾರಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಆದರೆ ಇದೀಗ, ವಂದೇ ಭಾರತ್ ಮಿಷನ್ ಅಡಿಯಲ್ಲಿ ನಿಗದಿತ ವೇಳೆಯಲ್ಲಿ ನಿಗದಿತ ವಿಮಾನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

error: Content is protected !!
Scroll to Top