ಮಂಚದಡಿಯಲ್ಲಿ ಗೋಣಿ ಚೀಲಕ್ಕೆ ತುಂಬಿಸಿಟ್ಟಿದ್ದ ಹತ್ತು ಕೆ.ಜಿ. ಗಾಂಜಾ ವಶ

(ನ್ಯೂಸ್ ಕಡಬ)newskadaba.com ಕಾಸರಗೋಡು, ಜೂ. 27, ಮನೆಯ ಮಂಚದಲ್ಲಿ ಬಚ್ಚಿಡಲಾಗಿದ್ದ ಹತ್ತು ಕಿಲೋ ಗಾಂಜಾವನ್ನು ಉಪ್ಪಳದ ಜೋಡುಕಲ್ಲು ಎಂಬಲ್ಲಿ ಅಬಕಾರಿ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.

ಜೋಡು ಕಲ್ಲು ಮಡಂದೂರಿನ ಅಬ್ದುಲ್ ಗಫೂರ್ ಎಂಬಾತನ ಮನೆಯಿಂದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಕುಂಬಳೆ ಅಬಕಾರಿ ದಳಕ್ಕೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದ್ದು, ಮನೆಯ ಮಂಚದಲ್ಲಿ ಗೋಣಿ ಚೀಲವೊಂದರಲ್ಲಿ ಗಾಂಜಾವನ್ನು ಬಚ್ಚಿಡಲಾಗಿತ್ತು .

ಅಬಕಾರಿ ಸಿಬಂದಿಗಳು ದಾಳಿ ನಡೆಸುವ ಮಾಹಿತಿ ತಿಳಿಯುತ್ತಿದಂತೆ ಗಫೂರ್ ಪರಾರಿಯಾಗಿದ್ದಾನೆ .
ಹೊರರಾಜ್ಯದಿಂದ ಗಾಂಜಾ ತಂದು ವಿವಿದೆಡೆ ಮಾರಾಟ ಮಾಡುತ್ತಿದ್ದ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

Also Read  ಈ 8 ರಾಶಿಯವರಿಗೆ ಶುಭಫಲ, ಕಂಕಣ ಭಾಗ್ಯ, ದಾಂಪತ್ಯದಲ್ಲಿನ ಕಲಹ, ವ್ಯಾಪಾರ ಅಭಿವೃದ್ಧಿ ಸುಧಾರಿಸುತ್ತದೆ

error: Content is protected !!
Scroll to Top