ಕಳಂಜಕ್ಕೆ ಬಂತು ಹೆಬ್ಬಾವು ➤ ಗ್ರಾಮಸ್ಥರ ಸಹಕಾರದಿಂದ ಬೇಂಗಮಲೆ ಕಾಡಿಗೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.22. ಮನೆಯ ವರಾಂಡಕ್ಕೆ ಆಗಮಿಸಿದ ಹೆಬ್ಬಾವನ್ನು ಗ್ರಾಮಸ್ಥರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಬೆಳ್ಳಾರೆ ಸಮೀಪದ ಕಳಂಜದ ಕೆ.ಪಿ. ಅಬ್ದುಲ್ಲಾರ ಮನೆಗೆ ಭಾನುವಾರ ರಾತ್ರಿ ಹೆಬ್ಬಾವೊಂದು ಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಳಂಜದ ಶಿವಪ್ರಸಾದ್, ಸತೀಶ್ ಆರ್ಟ್ ರೂಟ್, ವಿಶ್ವ ಕಳಂಜ, ಸುಧೀರ್ ಮೊದಲಾದವರು ಸೇರಿ ಹೆಬ್ಬಾವನ್ನು ಹಿಡಿದಿದ್ದಾರೆ. ತದನಂತರ ಕಳಂಜದ ನಝೀರ್ ಗ್ಯಾಲಕ್ಸಿ ಹಾಗೂ ಇಸ್ಮಾಯಿಲ್ ಬೇಂಗಮಲೆ ಕಾಡಿಗೆ ಬಿಡುವಲ್ಲಿ ಸಹಕರಿಸಿದ್ದಾರೆ.

Scroll to Top