ಏರಿಕೆಯತ್ತ ಪೆಟ್ರೋಲ್‌, ಡೀಸೆಲ್ ದರ

(ನ್ಯೂಸ್ ಕಡಬ) newskadaba.com  ನವದೆಹಲಿ,ಜೂ.22:  ಕಳೆದ ಎರಡು ತಿಂಗಳು ಜಾಗತಿಕವಾಗಿ ತೈಲ ಬೇಡಿಕೆ ಕುಸಿದು, ಬ್ರೆಂಟ್‌ ಕಚ್ಚಾ ತೈಲ ಫ್ಯೂಚರ್ಸ್‌ ದರ ದಾಖಲೆಯ ಇಳಿಕೆಯಾದರೂ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗುತ್ತಲ್ಲೇ ಇದ್ದು ಸತತ 16 ನೇ ದಿನವೂ ಕೂಡಾ ದರ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 33 ಪೈಸೆ ಹೆಚ್ಚಳವಾಗಿ 79.56ರೂ. ಆಗಿದ್ದರೆ ಡೀಸೆಲ್‌ 58 ಪೈಸೆ ಹೆಚ್ಚಳವಾಗಿ 78.85 ರೂ. ಬೆಲೆಗೆ ಏರಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ 34 ಪೈಸೆ ಹೆಚ್ಚಳವಾಗಿ 82.15 ಆಗಿದ್ದರೆ ಡೀಸೆಲ್‌ 55 ಪೈಸೆ ಹೆಚ್ಚಳವಾಗಿ 74.98 ಬೆಲೆಗೆ ಏರಿಕೆ ಕಂಡಿದೆ.

Scroll to Top