ಸೆ.26ರಿಂದ ನ.8ರ ತನಕ ಐಪಿಎಲ್!?

(ನ್ಯೂಸ್ ಕಡಬ)newskadaba.com ಜೂ.18, ನವದೆಹಲಿ, ಐಪಿಎಲ್‌ ಟಿ20 ಕ್ರಿಕೆಟ್‌ ಪ್ರೇಮಿಗಳಿಗೆ ಸಿಹಿ ಸುದ್ದಿಯ ಮುನ್ಸೂಚನೆ ದೊರೆತಿದೆ. ಬಿಸಿಸಿಐ 13ನೇ ಆವೃತ್ತಿಯ ಐಪಿಎಲ್‌ ಕೂಟದ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದೇ ಸೆಪ್ಟೆಂಬರ್ 26 ರಿಂದ ನವೆಂಬರ್ 8ರ ತನಕ ಕೂಟವನ್ನು ಸೀಮಿತ ಕ್ರೀಡಾಂಗಣಗಳಲ್ಲಿ ಆಯೋಜಿಸಲಿದೆ ಎಂದು ವರದಿ ತಿಳಿಸಿಿದೆ.

ಒಟ್ಟಾರೆ 60 ದಿನಗಳ ಈ ಕೂಟವನ್ನು ಈ ಸಲ 44 ದಿನಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಇದಕ್ಕಾಗಿ ಇದನ್ನು ಕೊರೋನಾ ತೀವ್ರತೆ ಕಡಿಮೆ ಇರುವ ನಗರಗಳ ಕ್ರೀಡಾಂಗಣವನ್ನು ಬಿಸಿಸಿಐ ಆಯ್ಕೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಇದೊಂದು ರೀತಿಯ ಕಿರು ಐಪಿಎಲ್‌, ಚುಟುಕಾಗಿ ಹಾಗೂ ಚುರುಕಾಗಿ ಕೂಟ ಮುಗಿಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಯೋಜನೆ ರೂಪಿಸಿಕೊಂಡಿದೆ, ಆದರೆ ಈ ಬಗ್ಗೆ ಬಿಸಿಸಿಐ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸೌರವ್‌ ಗಂಗೂಲಿ ವಿವಿಧ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಬರೆದಿರುವ ಪತ್ರದ ಪ್ರತಿಯನ್ನು ಆಧರಿಸಿ ಈ ವರದಿ ಹೊರಬಿದ್ದಿದೆ.

Also Read  ಉಗ್ರರ ದಾಳಿ ➤ 50 ಜನರ ಬಂಧನ, ತೀವ್ರ ವಿಚಾರಣೆ..! 

error: Content is protected !!
Scroll to Top