Breaking News ವಿಮಾನ ಪತನ ➤ ಮಹಿಳಾ ಫೈಲಟ್ ಸಹಿತ ಇಬ್ಬರ ದುರ್ಮರಣ

(ನ್ಯೂಸ್ ಕಡಬ)newskadaba.com ಜೂ. 8, ಒಡಿಶಾದಲ್ಲಿ ಸೋಮವಾರದಂದು ತರಬೇತಿ ವಿಮಾನ ಪತನವಾಗಿದ್ದು, ಬಿಹಾರ ಮತ್ತು ತಮಿಳುನಾಡು ಮೂಲದ ಇಬ್ಬರು ಪೈಲಟ್ ಗಳು ಮೃತಪಟ್ಟಿದ್ದಾರೆನ್ನಲಾಗಿದೆ.

ಒಡಿಶಾದ ಧೇಂಕ್ ನಲ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ದುರಂತದಲ್ಲಿ ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್ ಹಾಗೂ ಇನ್ ಸ್ರಕ್ಟರ್ ಸಾವನ್ನಪ್ಪಿದ್ದಾರೆ. ಈ ಘಟನೆಯು ಕಂಕದಾಹದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ತರಬೇತಿ ಸಂದರ್ಭ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಿಮಾನ ಪತನವಾಗಿದೆ ಎನ್ನಲಾಗಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Also Read 

error: Content is protected !!
Scroll to Top