ಸಾನಿಟೈಸರ್ ಸೇವಿಸಿ ತಾಯಿ, ಮಗ ಸಾವು..!

(ನ್ಯೂಸ್ ಕಡಬ) newskadaba.com ಆಂಧ್ರ ಪ್ರದೇಶ,ಮೇ.31: ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ಸಾನಿಟೈಸರ್ ಕುಡಿದು 24 ವರ್ಷದ ಯುವಕ ಹಾಗೂ 52 ವರ್ಷದ ಆತನ ತಾಯಿ ಇಬ್ಬರು ಮೃತಪಟ್ಟಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.
ಕಡಪಾ ಜಿಲ್ಲೆಯ ಚೆನ್ನೂರ್ ಮಂಡಲದ ಯಲ್ಲಮ್ಮ ಗುಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಶ್ರೀರಾಮ್ ನಾಯಕ್ ಮತ್ತು ಆತನ ತಾಯಿ ವಿಜಯಲಕ್ಷ್ಮಿ ಕಟ್ಟಡ ಕಾರ್ಮಿಕರಾಗಿದ್ದು, ಮದ್ಯ ಕುಡಿಯುತ್ತಿದ್ದರು. ಅದರಂತೆ ಭಾನುವಾರ ಸಂಜೆ ಕುಡಿಯಲು ಮದ್ಯ ಸಿಗದಿದ್ದಾಗ ಸಾನಿಟೈಸರ್ ಕುಡಿದಿದ್ದಾರೆ ಎಂದು ಚೆನ್ನೂರ್ ಪೊಲೀಸರು ತಿಳಿಸಿದ್ದಾರೆ.

Also Read  ➤ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಖರೀದಿಸುವವರಿಗೆ ಸಿಹಿ ಸುದ್ದಿ

 

 

ಸಾನಿಟೈಸರ್ ನಲ್ಲೂ ಆಲ್ಕೋಹಾಲ್ ಇರುತ್ತೆ. ಅದನ್ನು ಕುಡಿದರೂ ಕಿಕ್ ಏರುತ್ತೆ ಎಂದು ಯಾರೋ ಹೇಳಿದ್ದಾರೆ. ಹೀಗಾಗಿ ತಾಯಿ, ಮಗ ಇಬ್ಬರೂ ಸಾನಿಟೈಸರ್ ಸೇವಿಸಿದ್ದಾರೆ. ಬಳಿಕ ಇಬ್ಬರೂ ಪ್ರಜ್ಞೆತಪ್ಪಿ ಬಿದಿದ್ದು, ಅವರನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲಿಸರು ಕೂಡಲೇ ಇಬ್ಬರನ್ನು ಕಡಪ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಇಬ್ಬರೂ ಮೃತಪಟ್ಟಿದ್ದಾರೆ.

 

 

error: Content is protected !!
Scroll to Top