ಮಂಗಗಳ ಪಾಲಾದ ಕೊರೊನಾ ಪರೀಕ್ಷಾ ಮಾದರಿಗಳು..!!! ➤ ರೋಗ ಹರಡುವ ಭೀತಿಯಲ್ಲಿ ಜನತೆ

(ನ್ಯೂಸ್ ಕಡಬ) newskadaba.com ಮೀರತ್, ಮೇ.30., ಲ್ಯಾಬ್ ಟೆಕ್ನೀಷಿಯನ್ ಕೈಯಿಂದ ಕೋವಿಡ್-19 ಪರೀಕ್ಷಾ ಮಾದರಿಗಳನ್ನು ಮಂಗಗಳು ಕಿತ್ತು ತಿಂದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.


ಶಂಕಿತ ಕೊರೊನಾ ರೋಗಿಗಳಿಂದ ಸಂಗ್ರಹಿಸಲಾಗಿದ್ದ ಮಾದರಿಯನ್ನು ಲ್ಯಾಬ್ ಟೆಕ್ನೀಷಿಯನ್ ಮೀರತ್ ಮೆಡಿಕಲ್ ಕಾಲೇಜಿನಿಂದ ಪರೀಕ್ಷೆಗೆಂದು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಮಂಗಗಳು ದಾಳಿಮಾಡಿ ಅದನ್ನು ಕಸಿದುಕೊಂಡಿದೆ. ಬಳಿಕ ಸ್ಯಾಂಪಲ್ ಕಲೆಕ್ಷನ್ ಕಿಟ್ ಗಳನ್ನು ಬಾಯಿಗೆ ಹಾಕಿ ಜಗಿದು ಹಾಕಿವೆ. ಸ್ಯಾಂಪಲ್ ಪರೀಕ್ಷೆಗೆ ಹೋಗುವ ಮುನ್ನವೇ ಈ ರೀತಿ ಆಗಿದ್ದು, ಸ್ಥಳೀಯರಲ್ಲಿ ಕೊರೊನಾ ಹರಡುವ ಭೀತಿ ಹೆಚ್ಚಾಗಿದೆ.

Scroll to Top