(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.29: ಕೊರೋನಾ ಮಹಾಮಾರಿ ನಡುವೆ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡು ಗ್ರಾಹಕರು ಚಿನ್ನ ಕೊಳ್ಳಲು ಮುಂದಾಗಿದ್ದರು. ಆದ್ರೆ, ಇದೀಗಾ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಇದರಿಂದಗಿ ಚಿನ್ನ ಕೊಳ್ಳಲ್ಲು ಮುಂದಾಗಿದ್ದ ಗ್ರಾಹಕರಿಗೆ ನಿರಾಸೆಯಾಗಿದೆ. , ಹೌದು ಕಳೆದ ಮೂರ್ನಾಲ್ಕು ದಿನಗಳಿಂದ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಾಣುತ್ತಲೇ ಇತ್ತು. ಹೀಗಾಗಿ, ಚಿನ್ನ ಕೊಂಡುಕೊಳ್ಳುವವರು ತುಂಬಾನೇ ಉತ್ಸಾಹ ತೋರಿಸಿದ್ದರು.
ಆದರೆ, ಈಗ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ. ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 500 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಚಿನ್ನದ ಬೆಲೆ 43,900 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ಕೂಡ 470 ರೂಪಾಯಿ ಏರಿಕೆ ಕಂಡಿದ್ದು, 47,900 ರೂಪಾಯಿ ಆಗಿದೆ. ಲಾಕ್ಡೌನ್ ಆರಂಭವಾದಾಗಿನಿಂದಲೂ ಚಿನ್ನದ ದರ ಇಳಿಕೆ ಕಂಡಿದ್ದಕ್ಕಿಂತ ಏರಿಕೆ ಕಂಡಿದ್ದೇ ಹೆಚ್ಚು. ಆದರೆ, ಮೇ 23ರಿಂದ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಾಣುತ್ತಲೇ ಬಂದಿದೆ. ಬೆಳ್ಳಿ ಬೆಲೆಯಲ್ಲಿ ಅಲ್ಪ ಜಿಗಿತ ಕಂಡಿದೆ. ಕೆಜಿ ಬೆಳ್ಳಿಗೆ 600 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಳ್ಳಿ ದರ 48,500 ರೂಪಾಯಿ ಆಗಿದೆ.