(ನ್ಯೂಸ್ ಕಡಬ) newskadaba.com ಭಾರತ, ಮೇ.27:ನಿಂತಲ್ಲಿ , ಕುಂತಲ್ಲಿ , ಹೋದಲ್ಲಿ, ಬಂದಲ್ಲಿ, ಕೊನೆಗೆ ಸಾವಿನ ಮನೆಯಲ್ಲು ಟಿಕ್ ಟಾಕ್ ರಾಜಾಜಿಸುತ್ತಿತ್ತು. ಆದ್ರೇ ಕೇಳ ದಿನಗಳಿಂದ ಟಿಕ್ ಟಾಕ್ ಆ್ಯಪ್ ತನ್ನ ರೇಂಟಿಗ್ ಕಳೆದುಕೊಳ್ಳುತ್ತಿದೆ. ಹೌದು, ಭಾರತದಲ್ಲಿ ಕೆಳ ದಿನಗಳಿಂದ ಟಿಕ್ಟಾಕ್ ಆ್ಯಪ್ ಬಳಕೆದಾರರ ಸಂಖ್ಯೆ ತೀರಾ ಇಳಿಮುಖವಾಗಿದೆ. ಸ್ವದೇಶಿ ವಸ್ತುಗಳ ಬಳಕೆ ಮತ್ತು ಚೀನಾ ವಸ್ತುಗಳ ನಿಷೇಧ ಮಾಡುವ ಕಾರಣದಿಂದ ಅನೇಕರು ಟಿಕ್ಟಾಕ್ ಆ್ಯಪ್ ಬಳಸುವುದನ್ನು ನಿಲ್ಲಿಸಿದ್ದಾರೆ. ಮತ್ತೊಂಡೆದೆ ಸಾಮಾಜಿಕ ಜಾಲತಾಣದಲ್ಲಿ ಬ್ಯಾನ್ ಟಿಕ್ ಟಾಕ್ ಆ್ಯಪ್ ಎಂಬ ಅಭಿಯಾನ ನಡೆಯುತ್ತಿದೆ. ಈ ನಡುವೆ ಟಿಕ್ಟಾಕ್ ಬಳಕೆದಾರರ ಸಂಖ್ಯೆ ಕುಗ್ಗುತ್ತಿದೆ. ಇದರ ನಡುವೆ ಭಾರತೀಯ ಮೂಲದ ಹೊಸದೊಂದು ಆ್ಯಪ್ ಜನಪ್ರಿಯಗೊಳ್ಳುತ್ತಿದೆ. ಅದುವೇ ‘ಮಿತ್ರೋ’.
‘ಮಿತ್ರೋ‘ ಭಾರತದ ಮೂಲದ ವಿಡಿಯೋ ಶೇರಿಂಗ್ ಆ್ಯಪ್ ಆಗಿದ್ದು, ಬಿಡುಗಡೆಯಾದ ಒಂದು ತಿಂಗಳಲ್ಲೇ 5 ಮಿಲಿಯನ್ಗೂ ಹೆಚ್ಚು ಡೌನ್ ಕಂಡಿದೆ. ಈಗಾಗಲೇ ಸಾಕಷ್ಟು ಜನರು ಬಳಸುತ್ತಿದ್ದಾರೆ. ಟಿಕ್ಟಾಕ್ ಆ್ಯಪ್ ಬೇಡಿಕೆ ಕಳೆದುಕೊಂಡ ಬೆನ್ನಲೇ ಜನರು ‘ಮಿತ್ರೋ‘ ಆ್ಯಪ್ ಮೊರೆ ಹೋಗಿದ್ದಾರೆ. ಸದ್ಯ ಈ ಸ್ವದೇಶಿ ಆ್ಯಪ್ ಒಂದೇ ತಿಂಗಳಿನಲ್ಲಿ 50 ಲಕ್ಷಕ್ಕೂ ಅಧಿಕ ಡೌನ್ಲೋಡ್ ಕಂಡು ಬಳಕೆದಾರರನ್ನ ಸೆಳೆದುಕೊಂಡಿದೆ.ಐಐಟಿ ರೂರ್ಕಿಯ ವಿದ್ಯಾರ್ಥಿ ಶಿವಾಂಕ್ ಅಗರ್ವಾಲ್ ‘ಮಿತ್ರೋ‘ ಆ್ಯಪ್ ಸಿದ್ಧಪಡಿಸಿದ್ದಾರೆ. ಇನ್ನು ಹಿಂದಿಯಲ್ಲಿ ‘ಮಿತ್ರೋ‘ ಎಂದರೆ ಸ್ನೇಹಿತ ಎಂದು ಅರ್ಥವಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಬಳಸುವ ‘ಮಿತ್ರೋ‘ ಎಂಬ ಪದಕ್ಕೆ ಅನುಗುಣವಾಗಿ ‘ಮಿತ್ರೋ ಆ್ಯಪ್‘ ಹೆಚ್ಚು ಜನಪ್ರಿಯತೆ ಕಂಡಿದೆ.