ಜುಲೈಯಲ್ಲಿ ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆ

ಹೊಸದಿಲ್ಲಿ ಮೇ 8: ಸಿಬಿಎಸ್‌ಇಯ 10 ಮತ್ತು 12ನೇ ತರಗತಿಗಳ ಬಾಕಿ ಉಳಿಸಿರುವ 29 ವಿಷಯಗಳ ಪರೀಕ್ಷೆಯನ್ನು ಜುಲೈ ತಿಂಗಳಲ್ಲಿ ನಡೆಸಲು ನಿರ್ಧರಿಸಿರುವುದಾಗಿ ಶುಕ್ರವಾರ ಪ್ರಕಟಿಸಲಾಗಿದೆ.

ಹತ್ತು ಮತ್ತು 12ನೇ ತರಗತಿಗಳ 29 ವಿಷಯಗಳ ಪರೀಕ್ಷೆಯನ್ನು ಕೊರೋನ 9 ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಜುಲೈ 1ರಿಂದ ಜುಲೈ 15ರ ವರೆಗೂ ಪರೀಕ್ಷೆ ನಡೆಸುವುದಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ಪ್ರಕಟಿಸಿದ್ದಾರೆ.

ಜೆಇಇ (ಮೇನ್ಸ್) ಪರೀಕ್ಷೆ ಜುಲೈ 18ರಿಂದ 23ರ ವರೆಗೂ ನಡೆಸುವುದಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈಗಾಗಲೇ ಪ್ರಕಟಿಸಿದೆ. ನೀಟ್ ಪರೀಕ್ಷೆ ಜುಲೈ 26ರಂದು ನಿಗದಿಯಾಗಿದೆ. ಈ ಪ್ರವೇಶ ಪರೀಕ್ಷೆಗಳಿಗೂ ಮುನ್ನ ಬೋರ್ಡ್ ಪರೀಕ್ಷೆಗಳನ್ನು ಪೂರೈಸಲು ಕ್ರಮವಹಿಸಲಾಗಿದೆ.

Also Read  ಬಿಹಾರದಲ್ಲಿ ಪಾಕ್ ಪರ ಘೋಷಣೆ ➤ ಐವರ ಬಂಧನ

ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಅನುವಾಗುವ ನಿಟ್ಟಿನಲ್ಲಿ ಜುಲೈನಲ್ಲಿ ಬಾಕಿ ಇರುವ ವಿಷಯಗಳ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆ ನಡೆದಿರುವ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸುವಂತೆ ಈ ಹಿಂದೆಯೇ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

error: Content is protected !!
Scroll to Top