ಹೆಚ್ಚು ಪರೀಕ್ಷೆ ನಡೆಸದೆ ಕೊರೋನ ಗೆಲ್ಲಲು ಅಸಾಧ್ಯ: ಮನಮೋಹನ್ ಸಿಂಗ್

ಹೊಸದಿಲ್ಲಿ, ಎ.26: ಭಾರತದಲ್ಲಿ ಹೆಚ್ಚು ಪರೀಕ್ಷೆಗಳು ನಡೆಯದಿದ್ದರೆ ಕೊರೋನ ವಿರುದ್ಧ ಜಯ ಸಾಧಿಸಲು ಅಸಾಧ್ಯ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಮಾತನಾಡಿದ ಅವರು, ಕೊರೋನ ವೈರಸ್‌ಗೆ ಪರೀಕ್ಷೆ ಹಾಗೂ ಪತ್ತೆ ಹಚ್ಚುವಿಕೆ ಮುಖ್ಯ ಅಸ್ತ್ರಗಳಾಗಿವೆ. ಆಕ್ರಮಣಕಾರಿಯಾಗಿ ಪರೀಕ್ಷೆಗಳು ನಡೆಯದಿದ್ದಲ್ಲಿ ಕೊರೋನ ವಿರುದ್ಧ ಜಯ ಸಾಧಿಸಲು ಆಗುವುದಿಲ್ಲ ಎಂದರು.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರ ಸಮಸ್ಯೆಯ ವಿಚಾರದ ಬಗ್ಗೆ ಮಾತನಾಡಿದ್ದು, ಪಕ್ಷವು ವಲಸೆ ಕಾರ್ಮಿಕರ ರಕ್ಷಣೆಗಾಗಿ ಯೋಜನೆಯನ್ನು ರೂಪಿಸಲಿದೆ ಎಂದು ತಿಳಿಸಿದ್ದಾರೆ.

Also Read  ಮುಂಬಯಿಯಲ್ಲಿ ರೈಲು ಅವಘಡ ► ಕಡಬದ ವ್ಯಕ್ತಿ ಮೃತ್ಯು

ತಪಾಸಣೆ ಹಾಗೂ ಪತ್ತೆ ಮಾಡುವುದು ಕೊರೋನ ಹೋರಾಟ ವಿರುದ್ಧದ ಪ್ರಮುಖ ಅಸ್ತ್ರಗಳಾಗಿವೆ. ರಕ್ಷಣೆ ಹಾಗೂ ಆರ್ಥಿಕ ಭದ್ರತೆಗಳನ್ನು ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಅನುಸರಿಸಬೇಕು. ಇದೊಂದೇ ನಮ್ಮ ಮುಂದಿರುವ ದಾರಿಯಾಗಿದೆ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷ ಹೇಳಿದೆ.

ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಮುಖಂಡರಾದ ಕೆ.ಸಿ.ವೇಣುಗೋಪಾಲ್, ಜಯರಾಮ್ ರಮೇಶ್ ಹಾಗೂ ಮನೀಶ್ ತಿವಾರಿ ಈ ವೀಡಿಯೊದಲ್ಲಿ ಮಾತನಾಡಿದ್ದಾರೆ.

error: Content is protected !!
Scroll to Top