ದೇಶದಲ್ಲಿ 26 ಸಾವಿರ ದಾಟಿದ ಕೊರೋನ ಸೋಂಕಿತರು: 824 ಮಂದಿ ಸಾವು

ಹೊಸದಿಲ್ಲಿ, ಎ.26: ಭಾರತದಲ್ಲಿ ಕೋವಿಡ್-19 ಆರ್ಭಟ ಮುಂದುವರಿದಿದ್ದು ಸೋಂಕಿತರ ಸಂಖ್ಯೆ 26 ಸಾವಿರದ ಗಡಿ ದಾಟಿದೆ. ಮಹಾರಾಷ್ಟ್ರ, ಗುಜರಾತ್ ನಲ್ಲಿ ಸೋಂಕು ಪೀಡಿತರ ಸಂಖ್ಯೆ ದ್ವಿಗುಣಗೊಂಡಿರುವುದು ಕಳವಳವನ್ನು ಹೆಚ್ಚಿಸಿದೆ.

ಕೋವಿಡ್ -19 ಹೊಸ 5,000 ಪ್ರಕರಣಗಳು ಕೇವಲ 4 ದಿನಗಳಲ್ಲಿ ದಾಖಲಾಗಿರುವುದು ಆತಂಕವನ್ನು ಹೆಚ್ಚಿಸಿದೆ. ಶನಿವಾರ ಭಾರತದಾದ್ಯಂತ 1,834 ಹೊಸ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಮಹಾರಾಷ್ಟ್ರದಲ್ಲೇ 811 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದ ರಾಜಧಾನಿ ಮುಂಬೈ ವೈರಸ್ ಅಟ್ಟಹಾಸಕ್ಕೆ ನಲುಗಿ ಹೋಗಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ 602 ಪ್ರಕರಣಗಳು ದಾಖಲಾಗಿವೆ.

Also Read  ಮುಂದಿನ ತಿಂಗಳು ಎಲ್‌ಪಿಜಿ ದರದಲ್ಲಿ ಇಳಿಕೆ: ಸಚಿವ ಪ್ರಧಾನ್

ರಾಷ್ಟ್ರದ್ಯಂತ 824 ಮಂದಿ ಈ ಮಾರಕ ವೈರಸ್ ಗೆ ಪ್ರಾಣತ್ಯೆಜಿಸಿದ್ದು , ಶನಿವಾರ 46 ಮಂದಿ ಬಲಿಯಾಗಿದ್ದಾರೆ. ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಿದೆ.

ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ಆಂಧ‍್ರಪ್ರದೇಶ, ತೆಲಂಗಾಣದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

error: Content is protected !!
Scroll to Top